18 ರಂದು ಎಲ್ಐಸಿ ಪ್ರತಿನಿಧಿಗಳ 'ಹೈದರಾಬಾದ್ ಚಲೋ'
ಕನ್ನಡಪ್ರಭ ವಾರ್ತೆ, ಮಂಗಳೂರು, ಸೆ.14
ಜೀವ ವಿಮಾದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಸರ್ಕಾರದ ಕ್ರಮ ವಿರೋಧಿಸಿ ಸೆ.18ರಂದು ಹೈದರಾಬಾದಿನ ಎಲ್ಐಸಿ ದಕ್ಷಿಣ ಮಧ್ಯವಲಯ ಕಚೇರಿ ಎದುರು ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ 'ಹೈದರಾಬಾದ್ ಚಲೋ' ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ವಿದೇಶಿ ಬಂಡವಾಳ ಆಕರ್ಷಿಸಲು ಸಾರ್ವಜನಿಕ ಉದ್ದಿಮೆ, ಸೇವಾ ಸಂಸ್ಥೆ ಮತ್ತು ನಿಗಮಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ಹುನ್ನಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಐಸಿಯನ್ನು ಅಸ್ಥಿರಗೊಳಿಸಲು ವಿಮಾ ವ್ಯಾಪಾರದಲ್ಲಿ ಮತ್ತು ಪ್ರತಿನಿಧಿಗಳ ಸೇವೆ ಕಮಿಷನ್ ಕುರಿತು ಆಂತರಿಕ ತಿದ್ದುಪಡಿ ತರಲು ತೀರ್ಮಾನಿಸಿದೆ. 2009ರ ತಿದ್ದುಪಡಿ ಪ್ರಕಾರ ಗ್ರಾಮೀಣ ಭಾರತದಲ್ಲಿ 12,23,056 ವಿಮಾ ಪ್ರತಿನಿಧಿಗಳನ್ನು ಸೇವೆಯಿಂದ ಹೊರ ಹಾಕಲಾಗಿದೆ. 2013ರ ಫೆ. 16ರಂದು ಐಆರ್ಡಿಎ ಪ್ರಕಟಿಸಲಾದ ಗೆಜೆಟ್ ಪ್ರಕಾರ ಹಾಲಿ ಇರುವ 54 ಎಲ್ಐಸಿ ಪಾಲಿಸಿಗಳ ಮಾರಾಟ ಮುಕ್ತಾಯಗೊಳಿಸಿ, ಮುಂಬರುವ ಎಲ್ಲ ಪಾಲಿಸಿಗಳ ಪ್ರೀಮಿಯಂ ಮೇಲೆ ಶೇ.3.5 ಸೇವಾ ತೆರಿಗೆ ಕಟ್ಟಬೇಕಾಗುತ್ತದೆ ಎಂದರು.
ಬೇಡಿಕೆಗಳು: ವಿಮಾ ಪ್ರತಿನಿಧಿಗಳನ್ನು ಸೇವೆ ಮರು ಸೇರಿಸಿಕೊಳ್ಳಬೇಕು. ಎಲ್ಐಸಿಯಲ್ಲಿ ತರುತ್ತಿರುವ ಬದಲಾವಣೆಗಳನ್ನು ತಕ್ಷಣವೇ ಕಡ್ಡಾಯಗೊಳಿಸಬಾರದು. ಪ್ರತಿನಿಧಿಗಳ ಸೌಲಭ್ಯಗಳಾದ ಗ್ರಾಚ್ಯುಟಿ ಹೆಚ್ಚಳ, ಆರೋಗ್ಯ ವಿಮೆ, ಖಾತರಿ ಪಿಂಚಣಿ, ಕಲ್ಯಾಣ ನಿಧಿ ಒದಗಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

