ಹಿಂದೂ ಧರ್ಮ ಹೋರಾಟಕ್ಕೆ ಖಡ್ಗದೀಕ್ಷೆ
ಮಂಗಳೂರು: ಹಿಂದೂ ಸಮಾಜದ ಯುವಕರಲ್ಲಿ ದೇಶ, ಧರ್ಮಕ್ಕಾಗಿ ಹೋರಾಡುವ ಮನೋಭಾವ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಹಿಂದೂ ಧರ್ಮದ ಮೇಲೆ ದಾಳಿಯಾಗುತ್ತಿದ್ದು, ಇದನ್ನು ಮಟ್ಟಹಾಕುವ ಸಲುವಾಗಿ ಮುಂದಿನ ದಿನದಲ್ಲಿ 5 ಸಾವಿರ ಯುವಕರಿಗೆ ಖಡ್ಗದೀಕ್ಷೆ ನೀಡಲಾಗುವುದು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ಶ್ರೀಪ್ರಣವಾನಂದ ರಾಮ ಸ್ವಾಮೀಜಿ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಕರಲ್ಲಿ ಹೋರಾಟ ಮನೋಭಾವ ಮೂಡಿಸಿ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು. ಈಗಾಗಲೇ ರಾಜ್ಯಾದ್ಯಂತ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಖಡ್ಗದೀಕ್ಷೆ ಪಡೆದುಕೊಳ್ಳಲು ಹಲವು ಸಂಘಟನೆಗಳ ಯುವಕರು ಮುಂದೆ ಬಂದಿದ್ದಾರೆ ಎಂದರು.
ದುಡ್ಡಿನ ಮೂಲ ತನಿಖೆಯಾಗಲಿ: ಮಂಗಳೂರಿನಲ್ಲಿರುವ ಮುಸ್ಲಿಂ ಯುವಕರಿಗೆ ಸೂಕ್ತ ಕೆಲಸವಿಲ್ಲದೇ ಹೋದರೂ ಐಶಾರಾಮಿ ಕಾರುಗಳಲ್ಲಿ, ಬಂಗ್ಲೆಗಳಲ್ಲಿ ವಾಸವಾಗಿದ್ದಾರೆ. ಇವರಿಗೆಲ್ಲ ಎಲ್ಲಿಂದ ದುಡ್ಡು ಬರುತ್ತಿದೆ ಎಂಬ ಬಗ್ಗೆ ತನಿಖೆಯಾಗಬೇಕು. ಉಗ್ರ ಯಾಸಿನ್ ಭಟ್ಕಳ್ ತನ್ನ ಸಹಚರರೊಂದಿಗೆ ಆರು ತಿಂಗಳು ನಗರದ ಜನನಿಬಿಡ ಪ್ರದೇಶದ ಫ್ಲ್ಯಾಟ್ನಲ್ಲಿಯೇ ತಂಗಿದ್ದರೂ ಜಿಲ್ಲಾ ಪೊಲೀಸರಿಗೆ ಆತನ ಚಲನವಲನ ಗೊತ್ತಾಗದಿರುವುದು ಅಚ್ಚರಿ ತಂದಿದೆ. ಆತನ ಬಂಧನದ ಬಳಿಕವಾದರೂ ಪೊಲೀಸರು ಆತ ತಂಗಿದ್ದ ಫ್ಲ್ಯಾಟ್ ಅನ್ನು ಸುಪರ್ದಿಗೆ ತೆಗೆದುಕೊಂಡು ತನಿಖೆ ನಡೆಸಬೇಕಿತ್ತು. ಫ್ಲ್ಯಾಟ್ ಮಾಲೀಕರನ್ನು ಬಂಧಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಕೇವಲ ಹಿಂದೂ ಸಂಘಟನೆಗಳ ಮೇಲೆ ಕಾಕದೃಷ್ಟಿ ಬೀರುವುದು ಸರಿಯಲ್ಲ ಎಂದು ಸ್ವಾಮೀಜಿ ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

