ಕರೆಂಟ್ ಶಾಕ್ನಿಂದ ವಿದ್ಯಾರ್ಥಿ ಸಾವು
ಮಂಗಳೂರು: ಜ್ವರ ಪೀಡಿತ ಗೆಳೆಯನನ್ನು ನೋಡಲು ಬಂದ ಕಾಲೇಜ್ ವಿದ್ಯಾರ್ಥಿಯೊಬ್ಬನಿಗೆ ಆಸ್ಪತ್ರೆಗೆ ತಾಗಿಕೊಂಡಂತಿರುವ ವಿದ್ಯುತ್ ತಂತಿಗೆ ಕೈ ತಗುಲಿ ಮೃತಪಟ್ಟಿದ್ದಾನೆ.
ನಗರದ ಉಳ್ಳಾಲ ನರ್ಸಿಂಗ್ಹೋಂನಲ್ಲಿ ಗೆಳಯ ಮಲೇರಿಯಾ ಪೀಡಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ. ಆತನ ಆರೋಗ್ಯ ವಿಚಾರಣೆಗೆಂದು ಯಜ್ಞೇಶ್ (21) ಭಾನುವಾರ ರಾತ್ರಿ ಬಂದಿದ್ದ. ರಾತ್ರಿ 10.30ರ ವೇಳೆಗೆ ಆಸ್ಪತ್ರೆ ವರಾಂಡ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಪಕ್ಕದಲ್ಲಿದ್ದ ತಂತಿಗೆ ಕೈ ತಾಗಿದೆ. ತಕ್ಷಣ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ತಾಗಿಕೊಂಡಂತೆಯೇ ಇರುವ ವಿದ್ಯುತ್ ತಂತಿಯನ್ನು ರಕ್ಷಾ ಕವಚ ಹಾಕದೆ ಬಿಡಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯೂ ಜೀವಕ್ಕೆ ಬೆಲೆ ನೀಡಿಲ್ಲ. ಮೆಸ್ಕಾಂನವರೂ ಇದು ತಮ್ಮ ಕೆಲಸವಲ್ಲ ಎಂದು ಸುಮ್ಮನೆ ಉಳಿದಿದ್ದರು. ಪರಿಣಾಮ ಅಮಾಯಕನೊಬ್ಬನ ಪ್ರಾಣ ಹೋಗಿದೆ.
ಬಸ್ಗಳೆರಡು ಮುಖಾಮುಖಿ: 25 ಪ್ರಯಾಣಿಕರಿಗೆ ಗಾಯ
ವಿರಾಜಪೇಟೆ: ವಿರಾಜಪೇಟೆಯ ಚೆಂಬೆಬೆಳ್ಳೂರು ರಸ್ತೆಯ ಕಾವೇರಿ ಶಾಲೆ ತಿರುವಿನ ಬಳಿ ಸೋಮವಾರ ಬೆಳಗ್ಗೆ ಬಸ್ಗಳೆರಡು ಮುಖಾಮುಖಿ ಡಿಕ್ಕಿಯಾಗಿ ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ.
ವಿರಾಜಪೇಟೆ ಕಡೆಯಿಂದ ಕೊಂಡಂಗೇರಿ- ಹಾಲುಗುಂದ ಮಾರ್ಗವಾಗಿ ಮಡಿಕೇರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಡಿಕೇರಿ- ಮೂರ್ನಾಡು- ಹಾಲುಗುಂದ ಮಾರ್ಗವಾಗಿ ವಿರಾಜಪೆಟೆ ಕಡೆಗೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಡುವೆ ಬೆಳಗ್ಗೆ ಸುಮಾರು 8.15ಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್ನಲ್ಲಿ ವಿರಾಜಪೇಟೆ ಹಾಗೂ ಗೋಣಿಕೊಪ್ಪಲು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಖಾಸಗಿ ಬಸ್ನಲ್ಲಿ ಹಾಲುಗುಂದ- ಕೋಂಡಂಗೇರಿ ಕಡೆಯ ಶಾಲೆಯ ಶಿಕ್ಷಕರೂ ಇದ್ದರು. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಖಾಸಗಿ ಬಸ್ ಚಾಲಕ ಶಿವಣ್ಣ (34) ಹಾಗೂ ಅದೇ ಬಸ್ನಲ್ಲಿದ್ದ ವೃದ್ಧೆ ಕದನೂರಿನ ದೇಚಮ್ಮ (79) ಗಂಭೀರವಾಗಿದ್ದು, ಇವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗದಿಂದ ವಾಹನ ಚಲಾಯಿಸಿದ ಆರೋಪದ ಮೇರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಮಂಜುನಾಥ್ ವಿರುದ್ಧ ವಿರಾಜಪೇಟೆ ನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

