ನೇತ್ರಾವತಿ ತಿರುವು ಕುರಿತು ಸರಿಯಾದ ಅಧ್ಯಯನ ನಡೆಯಲಿ: ಕಿಶೋರ್
ಮಂಗಳೂರು: ನೇತ್ರಾವತಿ ನದಿ ನೀರನ್ನು ತಿರುಗಿಸುವ ಪ್ರಯತ್ನ ನಡೆಯುತ್ತಿದೆ. ತಜ್ಞರು ನೇತ್ರಾವತಿ ನದಿ ನೀರು ಹಾಗೂ ಪರಿಸರದ ಕುರಿತು ಮಾರ್ಚ್ನಲ್ಲಿ ಬಂದು ಸರಿಯಾದ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಮೇ ವರೆಗೆ ನೇತ್ರಾವತಿ ತಟದಲ್ಲಿರುವ ಸುಮಾರು 18 ಗ್ರಾಮಗಳು ನೀರಿನ ಅಭಾವ ಎದುರಿಸುತ್ತವೆ. ವರದಿಯಲ್ಲಿ ನೇತ್ರಾವತಿ ನದಿ ನೀರಿನ ಹರಿವು 460 ಟಿಎಂಸಿ ಎಂಬುದಾಗಿದೆ. ಆದ್ದರಿಂದ ತಜ್ಞರು ಮಾರ್ಚ್ ತಿಂಗಳಿನಲ್ಲಿ ಈ ಪ್ರದೇಶಕ್ಕೆ ಬಂದು ಇಲ್ಲಿನ ಪರಿಸರ ಹಾಗೂ ನೀರಿನ ಹರಿವಿನ ಬಗ್ಗೆ ಅಧ್ಯಯನ ನಡೆಸಲಿ ಎಂದರು. ಈಗಾಗಲೇ ವರದಿ ಸಲ್ಲಿಸಿರುವ ತಜ್ಞರು ಪರಿಸರ ಸಂಶೋಧಕರಲ್ಲ, ನೀರಾವರಿ ಎಂಜಿನಿಯರ್. ಬೆಂಗಳೂರಿನಲ್ಲಿ ಕುಳಿತು ಸೆಟ್ಲೈಟ್ ಮೂಲಕ ಅಧ್ಯಯನ ನಡೆಸದೆ, ಪರಿಸರಕ್ಕೆ ಭೇಟಿ ಕೊಟ್ಟು ಸ್ಥಿತಿಯನ್ನು ಅರಿತುಕೊಳ್ಳಲಿ. ಈಗಾಗಲೇ ಪಶ್ಚಿಮಘಟ್ಟದಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳಿಂದ ಪರಿಸರ ವಿನಾಶದಂಚಿನತ್ತ ಸಾಗಿದೆ. ಅಲ್ಲದೆ ಕಾಡಿನಲ್ಲಿರುವ ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿವೆ ಎಂದರು. ಪರಿಸರ ಉಳಿಸುವ ನೆಪದಲ್ಲಿ ಕೆಲವು ಪರಿಸರವಾದಿಗಳು, ಎನ್ಜಿಒಗಳ ಯೋಜನೆಗಳಾದ ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್, ಗ್ರೇಟರ್ ತಲಕಾವೇರಿ, ಮಾನವ-ಪ್ರಾಣಿ ಸಂಘರ್ಷ ತಡೆ ಯೋಜನೆ, ಹುಲಿ ಯೋಜನೆಗಳನ್ನು ಪಶ್ಚಿಮಘಟ್ಟದಲ್ಲಿ ಸೇರಿಸುವ ಹುನ್ನಾರ ನಡೆಸುತ್ತಿದ್ದು, ಸರ್ಕಾರ ಕೂಡಲೇ ಇವುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

