ದಕ್ಷಿಣ ಕನ್ನಡ

ದಕ ಜಿಲ್ಲೆಯಲ್ಲಿ 5223 ಮಂದಿ ಎಂಡೋಪೀಡಿತರು

Published On :

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಮೀಕ್ಷೆ ಪೂರ್ಣಗೊಂಡಿದ್ದು, ಇದರ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋ ಸಂತ್ರಸ್ತರ ಪರಿಹಾರ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಲ್ಲಿಸಿದರು.
23 ಪ್ರಾಥಮಿಕ ಆರೋಗ್ಯ ಕೇಂದ್ರಗಳ 310165 ಜನಸಂಖ್ಯೆಯಲ್ಲಿ 5223 ಎಂಡೋಸಲ್ಫಾನ್ ಪೀಡಿತ ಕಾಯಿಲೆಗೆ ತುತ್ತಾಗಿರುವುದನ್ನು ಪತ್ತೆಹಚ್ಚಲಾಗಿದೆ. ಇವರಲ್ಲಿ 179 ಮಂದಿ ಸಂಪೂರ್ಣ ಎಂಡೋಬಾಧಿತರಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಶಕ್ತರಾಗಿರುವುದಿಲ್ಲ.
ಬಂಟ್ವಾಳದ 3 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 43213 ಜನಸಂಖ್ಯೆಯಲ್ಲಿ 680 ಮಂದಿ ಎಂಡೋಪೀಡಿತ ಕಾಯಿಲೆಯಿಂದ ನರಳುತ್ತಿದ್ದಾರೆ. 26 ಮಂದಿ ಮಲಗಿದಲ್ಲೇ ಇದ್ದಾರೆ. ಬೆಳ್ತಂಗಡಿಯ 6 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 75973 ಜನಸಂಖ್ಯೆಯಲ್ಲಿ 2445 ಶಂಕಿತ ಎಂಡೋಪೀಡಿತರಿದ್ದು, 53 ಮಂದಿ ಮಲಗಿದಲ್ಲೇ ಇದ್ದಾರೆ. ಸುಳ್ಯದ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 38807 ಜನಸಂಖ್ಯೆಯಲ್ಲಿ 1372 ಪೀಡಿತರು, 61 ಮಂದಿ ಮಲಗಿದಲ್ಲೇ ಇದ್ದಾರೆ. ಪ್ರಾಥಮಿಕ ಸಮೀಕ್ಷೆಯಲ್ಲಿ ದೈಹಿಕ ಅಂಗವಿಕಲತೆ, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆ, ಅಪಸ್ಮಾರ, ಅರ್ಬುದ ಪ್ರಕರಣ, ಪಾರ್ಶ್ವವಾಯು, ಬಂಜೆತನ ಮತ್ತು ಗರ್ಭಪಾತ ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗಿದೆ. ಎಂಡೋಸಲ್ಫಾನ್ ಸಂಬಂಧಿ ಕಾಯಿಲೆಯಿಂದ ಮತೃಪಟ್ಟವರು 15 ಮಂದಿ, ಸಂಪೂರ್ಣ ಹಾಸಿಗೆ ಹಿಡಿದವರು 130, ತೀವ್ರ ಬುದ್ಧಿಮಾಂದ್ಯತೆ(ಶೇ.40) 376, ಇತರ ಅಂಗವಿಕಲತೆ (ಶೇ.40 ಮತ್ತು ತೀವ್ರ ಸಂಬಂಧಿತ ಕ್ಯಾನ್ಸರ್‌ನಿಂದ ಬಳಲುತ್ತಿರುವವರು) 1056 ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟು 1934 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. 73 ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ಪೀಡಿತರು, 161 ಕುಟುಂಬ ಮುಖ್ಯಸ್ಥ ಬಾಧಿತರು, 130 ಮಂದಿ ಸಂಪೂರ್ಣ ಹಾಸಿಗೆ ಹಿಡಿದವರು. ಸಂಪೂರ್ಣ ಹಾಸಿಗೆ ಹಿಡಿದವರಿಗೆ, ತೀವ್ರ ಬುದ್ಧಿಮಾಂದ್ಯತೆ ಮತ್ತು ಸಹಾಯ ಇಲ್ಲದೆ ಚಲಿಸಲಾಗದವಂಥವರಿಗೆ ಮತ್ತು ಸತ್ತವರ ವಾರಸುದಾರರಿಗೆ 5 ಲಕ್ಷ, ಇತರೆ ಅಂಗವಿಕತೆ ಇರುವವರಿಗೆ 3 ಲಕ್ಷ, ವೈದ್ಯಕೀಯ ಸೌಲಭ್ಯ ನೀಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.