ದಕ್ಷಿಣ ಕನ್ನಡ

ವರಳೆ ಸರೋಜ ನಕ್ಸಲ್ ಆರೋಪದಿಂದ ಮುಕ್ತಿ

Published On :

ಮಂಗಳೂರು: ನಕ್ಸಲ್ ಪ್ರಕರಣಗಳೆಲ್ಲ ಖುಲಾಸೆಗೊಂಡ ಹಿನ್ನೆಲೆಯಲ್ಲಿ ವರಳೆ ಸರೋಜಾ ಬುಧವಾರ ಜೈಲ್‌ನಿಂದ ಬಿಡುಗಡೆಗೊಂಡರು.
 ಉಡುಪಿ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಬಿಡುಗಡೆ ವೇಳೆ ಮಾಧ್ಯಮ ಜತೆ ಮಾತನಾಡಿದ, ಸರೋಜ, 'ನಾನು ತಪ್ಪು ಮಾಡಿಲ್ಲ, ಸುಳ್ಳು ಕೇಸ್ ಹಾಕಿ ಜೈಲಿಗೆ ತಳ್ಳಿದರು. 4 ವರ್ಷ ಜೈಲ್‌ನಲ್ಲಿ ಇರಬೇಕಾಯಿತು. ನಾನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟ ಮತ್ತು ಇತರ ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದೆ. ನನ್ನನ್ನು ನಕ್ಸಲ್ ಹಣೆ ಪಟ್ಟಿ ಹಚ್ಚಿ ಉಡುಪಿ ಎಸ್‌ಪಿ  ಬಂಧಿಸಿದ್ದರು. ಚಿಕ್ಕಮಗಳೂರು, ಉಡುಪಿಯಲ್ಲಿ 22 ಕೇಸ್ ಹಾಕಿದ್ದರು. ಇದರಿಂದ ನನ್ನ ಮಗು ಕೂಡಾ 3 ವರ್ಷ ಜೈಲ್‌ನಲ್ಲಿ ಇರಬೇಕಾಯಿತು. ನಿಜವಾದ ಆರೋಪಿಗಳನ್ನು ಹಿಡಿಯಲಿ, ಅಮಾಯಕರ ಮೇಲೆ ಅನ್ಯಾಯ ಮಾಡಬಾರದು. ಶಿವಮೊಗ್ಗಕ್ಕೆ ಹಿಂದಿರುಗಿ ಜನಪರಹೋರಾಟ ಮುಂದುವರಿಸುತ್ತೇನೆ' ಎಂದರು. ಬಿಡಗಡೆ ವೇಳೆ ಸಹೋದರ, ಪತಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.