ದಕ್ಷಿಣ ಕನ್ನಡ

ಕಾಲುಹಾದಿಲಿ ಕಂಡ ಮೊಸಳೆ ಕೆರೆಯಲ್ಲಿ ಕಣ್ಮರೆ!

Published On :

ಸುಬ್ರಹ್ಮಣ್ಯ: ಪಂಜ ಸಮೀಪದ ಕರಿಕ್ಕಳದ ನಿಡ್ವಾಳ ಎಂಬಲ್ಲಿ ಕೆರೆಯಲ್ಲಿ ಬುಧವಾರ ಮಧ್ಯಾಹ್ನ ಮೊಸಳೆ ಕಂಡು ಬಂದಿದ್ದು, ಜನರಲ್ಲಿ ಅಚ್ಚರಿ ಮೂಡಿಸಿತು.
ಐವತ್ತೊಕ್ಲು ಹಾಜಿ ಕುಂಞ ಅಲೇಮಾ ಎಂಬವರಿಗೆ ಸೇರಿದ ಕೆರೆಯಲ್ಲಿ ಮೊಸಳೆ ಕಂಡು ಬಂದಿದೆ.
ಮಧ್ಯಾಹ್ನದ ವೇಳೆಗೆ ತೋಟದ ಮಜಲು ಸುಂದರ ಎಂಬವರು ಅಲ್ಲೇ ಕಾಲುದಾರಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಮೊಸಳೆ ಕಾಣಸಿಕ್ಕಿದ್ದು ನಂತರ ಸಮೀಪದ ನಿವಾಸಿಗಳಿಗೆ ವಿಷಯ ತಿಳಿಸಿದರು.
 ಈ ವೇಳೆ ಮೊಸಳೆ ಗದ್ದೆ ಬದಿಯಲ್ಲಿ ಮಲಗಿದ್ದು, ನೂರಾರು ಜನ ನೋಡಲು ಮುಗಿಬಿದ್ದುದರಿಂದ ಅದು ಕೆರೆಗೆ ಹಾರಿ ಕಣ್ಮರೆಯಾಯಿತು. ಮೊಸಳೆ ಸುಮಾರು 1 ಮೀ ಉದ್ದವಿದ್ದು ಸಮೀಪದಲ್ಲಿ ಹೊಳೆಯೂ ಇಲ್ಲದಿರುವುದರಿಂದ ಎಲ್ಲಿಂದ ಬಂದಿರಬಹುದು ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿದ್ದು, ಮೊಸಳೆಗೆ ಬಲೆ ಬೀಸಿದ್ದಾರೆ. ಆದರೆ ಅದು ಮತ್ತೆ ಕಾಣಿಸಿ ಕೊಳ್ಳದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.