ಬಿಜೆಪಿ ಪರ ನಮೋ ಬ್ರಿಗೇಡ್ ಪ್ರಚಾರ ಬಿರುಸು
ಗಂಗೊಳ್ಳಿ: ನರೇಂದ್ರ ಮೋದಿಯವರು ಈ ದೇಶದ ಪ್ರಧಾನ ಮಂತ್ರಿಯಾಗಬೇಕು ಎನ್ನುವುದು ಈ ದೇಶದ ನಾಗರಿಕರ ಬಯಕೆಯಾಗಿದೆ. ನರೇಂದ್ರ ಮೋದಿ ಈ ದೇಶದ ಪ್ರಧಾನ ಮಂತ್ರಿಯಾಗುವವರೆಗೆ ನಮೋ ಬ್ರಿಗೇಡ್ ಕಾರ್ಯಕರ್ತರು ವಿರಮಿಸುವುದಿಲ್ಲ ಎಂದು ನಮೋ ಬ್ರಿಗೇಡ್ನ ಗಂಗೊಳ್ಳಿ ಘಟಕದ ಅಧ್ಯಕ್ಷ ಬಿ. ಗಣೇಶ ಶೆಣೈ ಹೇಳಿದರು. ಅವರು ಭಾನುವಾರ ನಮೋ ಬ್ರಿಗೇಡ್ನ ಗಂಗೊಳ್ಳಿ ಘಟಕದ ವತಿಯಿಂದ ಗಂಗೊಳ್ಳಿಯ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಾನಂದ ಶೇರುಗಾರ್, ಕಾರ್ಯದರ್ಶಿ ಉಮಾನಾಥ ದೇವಾಡಿಗ, ನಮೋ ಬ್ರಿಗೇಡ್ ಕಾರ್ಯಕರ್ತರಾದ ದಿಲೀಪ್ ಖಾರ್ವಿ, ಜಯರಾಮ ದೇವಾಡಿಗ, ಅಶೋಕ ಜಿ., ಸಂತೋಷ ಖಾರ್ವಿ, ಮೋಹನ ಖಾರ್ವಿ, ಗಜಾನನ ಶೆಣೈ, ಅಕ್ಷಯ ಶೆಣೈ, ಗಣೇಶ ಕಿಣಿ, ಜಿ. ರಾಘವೇಂದ್ರ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಖಾರ್ವಿ, ರಾಘವೇಂದ್ರ ಖಾರ್ವಿ, ಸುಧಾಕರ ಖಾರ್ವಿ ಇದ್ದರು.
'ಹಕ್ಕುಪತ್ರ ಆಮಿಷ' ಕಾಂಗ್ರೆಸ್ನ ಚುನಾವಣಾ ಗಿಮಿಕ್: ಬಿಜೆಪಿ
ಕಾರ್ಕಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತಿರುವ ವಸತಿರಹಿತರಿಗೆ ಸಕ್ರಮ ಮಾಡಿಕೊಂಡು ಹಕ್ಕುಪತ್ರ ನೀಡುವ ಕನೂನು ರೂಪಿಸುವ ಸಂದರ್ಭ ಅಡ್ಡಗಾಲು ಹಾಕಿದ ಕಾಂಗ್ರೆಸ್ ಇದೀಗ, ಸದನದಲ್ಲಿ ಈ ಬಗ್ಗೆ ಯಾವುದೇ ನಿರ್ಣಯ ಮಂಡನೆಯಾಗದೆ ಚುನಾವಣಾ ಸಂದರ್ಭ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಮತದಾರರಿಗೆ ಹಕ್ಕುಪತ್ರಕ್ಕಾಗಿ ಹಾದಿಬೀದಿಯಲ್ಲಿ ನಿಂತು ಅರ್ಜಿ ಪಡೆಯುತ್ತಿರುವುದು ತೀರಾ ಹಾಸ್ಯಾಸ್ಪದ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾರ್ಕಳ ಬಿಜೆಪಿ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಹತ್ತು ತಿಂಗಳಾಗುತ್ತಾ ಬಂದರೂ, ಹಕ್ಕುಪತ್ರ ನೀಡುವ ಬಗ್ಗೆ ಕ್ಷೇತ್ರದ ಹಾಲಿ ಶಾಸಕರು ಸಾಕಷ್ಟು ಬಾರಿ ಸದನದ ಗಮನ ಸೆಳೆದರೂ, ಈ ಬಗ್ಗೆ ಚಿಂತಿಸದ ಕಾಂಗ್ರೆಸಿಗರು ಚುನಾವಣೆ ಘೋಷಣೆಯಾದ ಬಳಿಕ, ಕಾಂಗ್ರೇಸ್ ಸಂಸದರು ಆಯ್ಕೆಯಾದರೆ ಹಕ್ಕುಪತ್ರ ಕೊಡುತ್ತಾರೆ ಎಂಬ ಆಮಿಷದೊಂದಿಗೆ ಪ್ರಚಾರ ಮಾಡುತ್ತಿರುವುದು ಖಂಡನೀಯ ಮತ್ತು ಜನರನ್ನು ದಿಕ್ಕುತಪ್ಪಿಸುವ ತಂತ್ರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್ ಮತ್ತು ಮಹಾವೀರ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
146 ಗ್ರಾ.ಪಂ.ಗಳಲ್ಲಿ ಸ್ವೀಪ್ ಜಾಥಾ: ಸಿಇಒ ಕನಗವಲ್ಲಿ
ಮಣಿಪಾಲ: ಉಡುಪಿ ಜಿಲ್ಲೆಯ ಎಲ್ಲಾ 146 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಪ್ರೇರೇಪಿಸಲು ಆಯಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಜಾಥಾಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ ಹೇಳಿದರು.
ಉಡುಪಿ ತಾಲೂಕಿನಲ್ಲಿ ಏ. 3, 4, 5 ಮತ್ತು 7ರಂದು, ಕಾರ್ಕಳ ತಾಲೂಕಿನಲ್ಲಿ 3, 4, 5, 7 ಮತ್ತು 9ರಂದು, ಕುಂದಾಪುರ ತಾಲೂಕಿನಲ್ಲಿ 7, 8 ಮತ್ತು 9ರಂದು ಪಂಚಾಯಿತಿ ಅಭಿವೃದ್ಧಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಎಲ್ಲ ಸರ್ಕಾರಿ ನೌಕರರು, ಸಾರ್ವಜನಿಕರ ಸಹಕಾರದಿಂದ ಕನಿಷ್ಠ 1 ಕಿ.ಮೀ. ಜಾಥಾ ನಡೆಸಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮುಂದಿನ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಜಾಥಾ, ಜಿಲ್ಲಾ ಮಟ್ಟದಲ್ಲೂ ನಡೆಸಲಾಗುವುದು ಎಂದು ಜಿಪಂ ಸಿಇಓ ತಿಳಿಸಿದ್ದಾರೆ.
ಕನ್ಯಾಡಿ ಕ್ಷೇತ್ರದಲ್ಲಿ 54ನೇ ಶ್ರೀರಾಮ ತಾರಕ ಮಂತ್ರ ಸಪ್ತಾಹಕ್ಕೆ ಚಾಲನೆ
ಬೆಳ್ತಂಗಡಿ: ಧರ್ಮಸ್ಥಳ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 54ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹಕ್ಕೆ ಮಂಗಳವಾರ ಚಾಲನೆ ದೊರೆಯಿತು. ಶಾಸಕ ಕೆ. ವಸಂತ ಬಂಗೇರ ಅಖಂಡ ನಂದಾದೀಪವನ್ನು ಉದ್ಘಾಟಿಸಿದರು. ಶ್ರೀರಾಮ ತಾರಕ ನಮೋಚ್ಚಾರಣೆ ಪ್ರಾರಂಭಿಸುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು. ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ, ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ತಾ.ಪಂ. ಅಧ್ಯಕ್ಷ ಕೇಶವ ಎಂ., ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಬಿಜೆಪಿ ತಾಲೂಕಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿ.ಪಂ. ಸದಸ್ಯ ಶೈಲೇಶ್ ಕುಮಾರ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಗೌಡ, ತಾ.ಪಂ. ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ವಿನೋದಿನಿ ರಾಮಪ್ಪ, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಸೂರ್ಯಪ್ರಕಾಶ್, ಚಿತ್ತರಂಜನ ಗರೋಡಿ, ಮೋಹನ್ ಉಜ್ಜೋಡಿ, ತುಕರಾಮ ಸಾಲ್ಯಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

