ದಕ್ಷಿಣ ಕನ್ನಡ

ಉದ್ಯಮಿಯಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಬಂಧನ

Published On :

ಉಡುಪಿ: ಜಿಲ್ಲಾ ಕಾರಾಗೃಹದಲ್ಲಿರುವ ಆರೋಪಿ ಬಂಟಕಲ್‌ನ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಜೀವಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಹಣವನ್ನು ಪಡೆಯಲು ಬಂದ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಉಡುಪಿ ಸಲೀಂ ಅಲಿಯಾಸ್ ಮಂಚಿ ಸಲೀಂ (33) ಆರೋಪಿ. ಈತ 76 ಬಡಗುಬೆಟ್ಟು ಮಂಚಿಕೆರೆ ನಿವಾಸಿಯಾಗಿದ್ದು, ಕೊಲೆ ಆರೋಪದಲ್ಲಿ ಹಿರಿಯಡ್ಕ ಜೈಲಿನಲ್ಲಿರುವ ಸಂತೋಷ್ ಪೂಜಾರಿ ಸ್ನೇಹಿತ.
ಪ್ರಕರಣದ ಹಿನ್ನೆಲೆ: ಮಾ.26ರಂದು ರಾತ್ರಿ ಸುಮಾರು 7 ಗಂಟೆಗೆ ಬಂಟಕಲ್‌ನಲ್ಲಿ ಗ್ರಾನೈಟ್ ಉದ್ಯಮ ನಡೆಸುತ್ತಿರುವ ಮಾಧವ ಕಾಮತ್ ಅವರ ಮೊಬೈಲ್‌ಗೆ ಸಂತೋಷ ಪೂಜಾರಿ ಕರೆ ಮಾಡಿ 2 ಲಕ್ಷ ಹಣ ಕೊಡಬೇಕೆಂದು ಕೇಳಿದ್ದ. ನಂತರ ಮತ್ತೊತ್ತ ಆರೋಪಿ ನಾಗರಾಜ ಬಳೇಗಾರ ಮತ್ತು ಸಂತೋಷ ಪೂಜಾರಿ ಇಬ್ಬರೂ ಸೇರಿ ಮಾ.26ರಿಂದ ಏ. 2ವರೆಗೆ ನಿರಂತರವಾಗಿ ಹಣ ಕೊಡಲು ಪೀಡಿಸುತ್ತಿದ್ದು, ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮಾಧವ ಕಾಮತ್ ಅವರು ಏ. 2ರಂದು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾಪು ಪೊಲೀಸ್ ವೃತ್ತ ನಿರೀಕ್ಷಕ ಸುನೀಲ್ ವೈ. ನಾಯಕ್ ನೇತೃತ್ವದಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಡಿಸಿಐಬಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಶಿರ್ವ ಠಾಣೆ ಪಿಎಸ್‌ಐ ಅಶೋಪ್  ಮತ್ತು ಸಿಬ್ಬಂದಿ ತಂತ್ರ ಹೆಣೆದು ಗುರುವಾರ ಆರೋಪಿಗಳಿಗೆ ಹಣ ನೀಡಲು ದಿನ ನಿಗದಿ ಮಾಡಿದ್ದರು. ಆರೋಪಿಗಳು ದೂರವಾಣಿ ಕರೆ ಮಾಡಿ ಒಂದು ಸ್ಥಳಕ್ಕೆ ಮಂಚಿ ಸಲೀಂ ಎಂಬಾತನನ್ನು ಹಣಪಡೆಯಲು ಕಳುಹಿಸಿದ್ದು,  ಆತನನ್ನು ಬಂಧಿಸಿದ್ದಾರೆ. ಸಲೀಂನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.