ದಕ್ಷಿಣ ಕನ್ನಡ

ಅಕ್ರಮ ಪ್ರವೇಶ: ಶ್ರೀಲಂಕಾ 16 ಮೀನುಗಾರರ ಸೆರೆ

Published On :

ಮಂಗಳೂರು: ಭಾರತದ ಗಡಿ ಪ್ರವೇಶಿಸಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಶ್ರೀಲಂಕಾ ಮೂಲದ ಹಡಗನ್ನು ಭಾರತೀಯ ನೌಕಾಪಡೆಯ ರಾಜ್‌ದೂತ್ ನೌಕೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಶ್ರೀಲಂಕಾದ ಕೊಲಂಬೋ ಮರೈನ್ ಹಡಗಿನಲ್ಲಿದ್ದ 16 ಮಂದಿ  ಶ್ರೀಲಂಕಾ ಮೀನುಗಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನವಮಂಗಳೂರು ಬಂದರಿನ 188 ನಾಟಿಕಲ್ ಮೈಲ್ ದೂರದ ಲಕ್ಷದ್ವೀಪ ಸಮೀಪ ಚೆರಿಯಪಾಣಿ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಶ್ರೀಲಂಕಾ ಹಡಗು ಅಕ್ರಮವಾಗಿ ಭಾರತೀಯ ಕಡಲ ತೀರ ಪ್ರವೇಶಿಸಿದೆ ಎಂಬ ಮುಂಬೈ ನೌಕಾಪಡೆಯ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಹಡಗಿನಲ್ಲಿದ್ದ 1.20 ಲಕ್ಷ ಮೌಲ್ಯದ ಮೀನು, 16 ಗ್ಯಾಸ್ ಸಿಲಿಂಡರ್, ವೈರ್‌ಲೆಸ್, ಡೈವಿಂಗ್ ಸಾಧನ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕೋಸ್ಟ್‌ಗಾರ್ಡ್ ಡಿಐಜಿ ರಾಜಮಣಿ ಶರ್ಮಾ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ಕೋಸ್ಟ್‌ಗಾರ್ಡ್ ಅಧಿಕಾರಿಗಳು, ಸಿಬ್ಬಂದಿ ಜತೆ ಸಂತ ಆಂತೋನಿ ಹಡಗು ಕೂಡ ಕಾರ್ಯಾಚರಣೆಯಲ್ಲಿ ಸಹಕರಿಸಿತ್ತು. ಬಂಧಿತ 16 ಮಂದಿಯನ್ನು ಮಂಗಳೂರಿಗೆ ಕರೆತರಲಾಗಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಅಧಿಕಾರಿಗಳಾದ ಆರ್.ಎಂ.ಶರ್ಮಾ, ಅನುಪಮ್ ರೈ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.