ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಉದ್ಘಾಟನೆ
ಮಣಿಪಾಲ: ಮಣಿಪಾಲ ಹೆಲ್ತ್ ಎಂಟರ್ ಪ್ರೈಸಸ್ ಅಧೀನದ ಆಸ್ಪತ್ರೆಗಳ ರೋಗಿಗಳಿಗೆ ರಿಯಾಯತಿ ದರದಲ್ಲಿ ವೈದ್ಯಕೀಯ ಸೇವೆ ನೀಡುವ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ಉದ್ಘಾಟನಾ ಸಮಾರಂಭ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆಯಿತು. ಮಣಿಪಾಲ ವಿ.ವಿ.ಯ ಕುಲಪತಿ ಡಾ. ರಾಮದಾಸ ಎಂ. ಪೈ ಅವರು ಈ ಕಾರ್ಡನ್ನು ಫಲಾನುಭವಿಗೆ ವಿತರಿಸುವ ಮೂಲಕ 14ನೇ ವರ್ಷದ ಈ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಜನೆಯ ಬಗ್ಗೆ ವಿ.ವಿ. ಕುಲಸಚಿವ ಡಾ.ಜಿ.ಕೆ. ಪ್ರಭು ಮಾಹಿತಿ ನೀಡಿದರು. ಮಣಿಪಾಲ ವಿ.ವಿ.ಯ ಉಪಕುಲಪತಿ ಡಾ. ರಾಮನಾರಾಯಣನ್, ಸಹಉಪಕುಲಪತಿ ಡಾ. ಸುರೇಂದ್ರ ಶೆಟ್ಟಿ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರಿನ ಡೀನ್ ಡಾ. ವೆಂಕಟ್ರಾಯ ಪ್ರಭು, ಮಣಿಪಾಲದ ಡೀನ್ ಡಾ. ಪ್ರದೀಪ್ ಕುಮಾರ್ ಇದರು.
ಅಕ್ರಮ ಮರಳು ಸಾಗಾಟ: ದಾಳಿ ನಡೆಸಿ ಕೈ ಬಿಟ್ಟರು!
ಮಂಗಳೂರು: ಪಾವೂರಿನ ಮಲಾರ್ನಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ವಾಪಾಸ್ ಮರಳಿದ್ದಾರೆ. ಮಾಹಿತಿ ಆಧಾರದಲ್ಲಿ ಕೊಣಾಜೆ ಪೊಲೀಸ್ ಬೆಂಗಾವಲಿನಲ್ಲಿ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು. ಈ ಸಂದರ್ಭ ಮರಳುಕೋರರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಲಾರಿಗಳಲ್ಲಿ ಮರಳು ಪೇರಿಸಿ ಸಾಗಾಟಕ್ಕೆ ಸಿದ್ಧವಾಗಿತ್ತು. ಆಗ ರಾಜಕೀಯ ಒತ್ತಡ ಹಿನ್ನೆಲೆಯಲ್ಲಿ ಖಾಲಿ ಕೈಯಲ್ಲಿ ಅಧಿಕಾರಿಗಳು ಮರಳಿದರು ಎನ್ನಲಾಗಿದೆ. ಇನೋಳಿಯಿಂದ ಒಂದು ಲೋಡು ಮರಳಿಗೆ ರು. 4,500 ನೀಡಿ ಕೇರಳಕ್ಕೆ ರು. 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಪ್ರತಿ ರಾತ್ರಿ 10 ಲಾರಿಗಳಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟವಾಗುತ್ತಿದೆ. ಗ್ರಾಮ ಪಂಚಾಯ್ತಿ ಪರವಾನಗಿ ಪಡೆಯದಿದ್ದರೂ ಅವರ ಗಮನಕ್ಕೆ ಬಂದೇ ಈ ವ್ಯವಹಾರ ನಡೆಯುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು. 'ಅಕ್ರಮ ಮರಳು ಸಾಗಾಟ ಕುರಿತಂತೆ ಸಂಬಂಧಿತರಿಗೆ ನೋಟಿಸ್ ನೀಡಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಇಲಾಖೆ ಅಧಿಕಾರಿ ಸೋಮಶೇಖರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

