ದೇಶದಲ್ಲಿ 11 ಹೊಸ ಆರ್ಥಿಕ ಸಾಕ್ಷರತಾ ಕೇಂದ್ರ
ಮಂಗಳೂರು: ಸಿಂಡಿಕೇಟ್ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಪ್ರಾಯೋಜಕತ್ವದ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಟ್ರಸ್ಟ್ 11 ಹೊಸ ಆರ್ಥಿಕ ಸಾಕ್ಷರತಾ ಕೇಂದ್ರ ತೆರೆದಿದೆ. ಕರ್ನಾಟಕದಲ್ಲಿ 11, ಕೇರಳ 4, ಆಂಧ್ರ, ಉತ್ತರ ಪ್ರದೇಶ, ಲಕ್ಷದ್ವೀಪದಲ್ಲಿ ತಲಾ ಒಂದು ಕೇಂದ್ರ ತೆರೆದಿದೆ. ದೇಶದಲ್ಲಿ ಒಟ್ಟು 55 ಕೇಂದ್ರ ಹೊಂದಿವೆ.
ಇವುಗಳಲ್ಲಿ 27 ಕೇಂದ್ರ ಜಿಲ್ಲಾ ಮಟ್ಟ ಮತ್ತು 28 ಕೇಂದ್ರ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಟ್ರಸ್ಟ್ ಕೇಂದ್ರಗಳು 13,696 ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಅಭಿಯಾನ ನಡೆಸಿದ್ದು 6 ಲಕ್ಷಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ. 3073 ಗ್ರಾಮ ಅಭಿಯಾನದಲ್ಲಿ 109361 ಹಳ್ಳಿಗರು, ಸ್ವಸಹಾಯ ಗುಂಪುಗಳಲ್ಲಿ ನಡೆಸಿದ 2294 ಕಾರ್ಯಕ್ರಮಗಳಿಂದ 54340 ಸದಸ್ಯರು, 284 ರೈತ ಸಂಘಗಳಲ್ಲಿ ನಡೆಸಿದ ಅಭಿಯಾನದಲ್ಲಿ 9252 ರೈತರು ಇದ್ದರು. 2191 ಹಿರಿಯ ಪ್ರಾಥಮಿಕ ಶಾಲೆ ಮತ್ತು 1870 ಪ್ರೌಢಶಾಲೆಗಳ 239762 ವಿದ್ಯಾರ್ಥಿಗಳಿಗೆ ಉಳಿತಾಯ ಮಹತ್ವ ತಿಳಿಸಲಾಗಿದೆ. ಆರ್ಥಿಕ ಸೌಲಭ್ಯಕ್ಕೆ ನಡೆಸಿದ 2446 ಅಭಿಯಾನದಲ್ಲಿ 100889 ಮಹಿಳೆಯರು, ಪಿಂಚಣಿದಾರರು, ಗ್ರಾಮೀಣರು ಒಳಗೊಂಡಿದ್ದಾರೆ. ಮುಂದಿನ ವರ್ಷದಲ್ಲಿ 17000ಕ್ಕೂ ಅಧಿಕ ಸಾಕ್ಷರತಾ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು, ಇನ್ನೂ 10 ಹೊಸ ಆರ್ಥಿಕ ಸಾಕ್ಷರತಾ ಕೇಂದ್ರ ತೆರೆಯುವ ಯೋಜನೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

