ದಕ್ಷಿಣ ಕನ್ನಡ

ಕಿಂಞಣ್ಣ ರೈಗೆ 'ಕರ್ನಾಟಕ ರತ್ನ' ನೀಡಿ: ವಾಟಾಳ್

Published On :

ಬೆಂಗಳೂರು: ಕನ್ನಡ ಹೋರಾಟಗಾರ, ಹಿರಿಯ ಸಾಹಿತಿ ಕಯ್ಯಾರ ಕಿಂಞಣ್ಣ ರೈ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಗಡಿನಾಡಿನಲ್ಲಿದ್ದುಕೊಂಡು ಕನ್ನಡ ನಾಡು, ನುಡಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಕಾಣಿಕೆ ಸಲ್ಲಿಸಿರುವ ಕಿಂಞಣ್ಣ ರೈ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ಇದು ಅರ್ಥಪೂರ್ಣ ಸಮಯ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.
ಕಿಂಞಣ್ಣ ರೈ ಅವರ ಕನ್ನಡ ಸೇವೆಗಾಗಿ ಅವರನ್ನು ಸರ್ಕಾರವೇ ಗೌರವಿಸಲಿದೆ ಎಂದು ರಾಮಚಂದ್ರಗೌಡ ಸಚಿವರಾಗಿದ್ದಾಗ ಅಧಿವೇಶನಲ್ಲೇ ಪ್ರಕಟಿಸಿದ್ದರು. ಆದರೆ ಅದು ಈತನಕ ಈಡೇರಿಲ್ಲ. ಕಿಂಞಣ್ಣ ರೈ ಅವರಿಗೆ ಜೂನ್ 8ಕ್ಕೆ 100 ವರ್ಷ ತುಂಬುತ್ತಿದ್ದು, ಅವರೀಗ ಶತಾಯುಷಿ ಕನ್ನಡ ಹೋರಾಟಗಾರ ಎನಿಸಿಕೊಳ್ಳಲಿದ್ದಾರೆ. ಆದ್ದರಿಂದ ಈ ಸಂಭ್ರಮದಲ್ಲಾದರೂ ಅವರಿಗೆ ಸರ್ಕಾರ ಸೂಕ್ತ ಗೌರವ ಸಲ್ಲಿಸಬೇಕು. ಹಾಗೆಯೇ ಕಿಂಞಣ್ಣ ರೈ ಅವರ ಹುಟ್ಟು ಹಬ್ಬವನ್ನು ಕೂಡ ಸರ್ಕಾರದಿಂದಲೇ ಆಚರಿಸಬೇಕು ಎಂದು ವಾಟಾಳ್ ಆಗ್ರಹಿಸಿದರು.
ಕಿಂಞಣ್ಣ ರೈ ಅವರ ಹುಟ್ಟುಹಬ್ಬಕ್ಕೆ ಕನ್ನಡ ಸಾಹಿತ್ಯ ಪರಿಷತ್ ಕೂಡ ತನ್ನದೇ ಕಾಣಿಕೆ ನೀಡಬೇಕಿದೆ. ರೈ ಅವರ ಜನ್ಮದಿನಕ್ಕಾಗಿ ಅದ್ಧೂರಿ ಸಮಾರಂಭ ನಡೆಸಲು ತೀರ್ಮಾನಿಸಬೇಕು. ಕಾಸರಗೋಡು ಜಿಲ್ಲೆಯ ಪೆರಡಾಲದಲ್ಲಿರುವ ಕಿಂಞಣ್ಣ ರೈ ಅವರು ನಿವಾಸವನ್ನು ನಾಡಿನ ಸ್ಮಾರಕವಾಗುವಂತೆ ಮಾಡಬೇಕು. ಇದಕ್ಕೆ ಸರ್ಕಾರದಿಂದ ಅಗತ್ಯ ನೆರವನ್ನೂ ಪಡೆಯಬೇಕೆಂದು ಅವರು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.