ದಕ್ಷಿಣ ಕನ್ನಡ

ಉಕ್ಕಿ ಹರಿದ ನಂದಿನಿ ನದಿ: ತಗ್ಗು ಪ್ರದೇಶ ಜಲಾವೃತ

Published On :

ಮೂಲ್ಕಿ: ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಬಿರುಸಿನ ಮಳೆಗೆ ನಂದಿನಿ ನದಿ ಉಕ್ಕಿ ಹರಿಯುತ್ತಿದ್ದು, ಶುಕ್ರವಾರ ಸಂಜೆಯಿಂದ ಕಟೀಲು, ಹಳೆಯಂಗಡಿ, ಪಂಜ, ಕಿಲೆಂಜೂರು, ಶಿಬರೂರು, ಪಾವಂಜೆ ಸೇರಿದಂತೆ ನಂದಿನ ನದಿ ಸಮೀಪದ ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ಕಟೀಲು ದೇವಳದ ಸುತ್ತ ಹರಿಯುತ್ತಿರುವ ನಂದಿನಿ ನದಿ ಉಕ್ಕಿ ಹರಿದು ನದಿಗೆ ಅಳವಡಿಸಿದ ಕಟೀಲು ದೇವಳದ ವಿದ್ಯುತ್ ಉತ್ಪಾದನಾ ಘಟಕ ಯಂತ್ರವು ನೀರಿನಲ್ಲಿ ಕೊಚ್ಚಿ ಹೋಗಿದ್ದು ಘಟಕ್ಕೆ ಅಪಾರ ಹಾನಿಯಾಗಿದೆ.
ಇತ್ತೀಚೆಗೆ ಕೇವಲ ಅಲ್ಪ ಪ್ರಮಾಣದ ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಇದೀಗ ಹಾನಿಗೊಂಡಿದೆ. ಶನಿವಾರ ಮಧ್ಯಾಹ್ನದಿಂದ ನೀರಿನ ಹರಿವು ಕಡಿಮೆಯಾಗುತ್ತಾ ಬಂದಿದೆ. ದೇವಳದ ಪರಿಸರ ಜಲಾವೃತಗೊಂಡಿದ್ದು, ಭಕ್ತರು ಸಂಕಷ್ಟ ಅನುಭವಿಸಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಗ್ಗು ಪ್ರದೇಶವಾಗಿರುವ ಪ್ರತಿ ಮಳೆಗಾಲದಲ್ಲಿ ನೆರೆ ಸಮಸ್ಯೆಯನ್ನು ಅನುಭವಿಸುವ ಪಂಜದಲ್ಲಿ ಬಿರುಸಿನ ಮಳೆಗೆ ಶುಕ್ರವಾರ ರಾತ್ರಿಯಿಂದ ನಂದಿನಿ ನದಿ ನೀರು ಕೃಷಿ ಭೂಮಿಗೆ ನುಗ್ಗಿದೆ. ಅತ್ತೂರು ಮಹಾಗಣಪತಿ ಮಂದಿರಕ್ಕೆ ಹೋಗುವ ರಸ್ತೆಯು ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡ್ಡಿಯಾಗಿದೆ.
ಪಂಜದಲ್ಲಿ ನೂತನವಾಗಿ ನಿರ್ಮಾಣ ಹಂತದಲ್ಲಿರುವ ರಸ್ತೆಯು ನೀರಿನಿಂದ ಆವೃತ್ತವಾಗಿ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಸುಮಾರು 45 ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲಿನವರು ದೋಣಿಯನ್ನು ಅವಲಂಬಿಸಿದ್ದಾರೆ.
ಕಟೀಲು ಸಮೀಪದ ಕಿಲೆಂಜೂರು ಪ್ರದೇಶಗಳಲ್ಲಿ ನಂದಿನಿ ನದಿ ಬದಿಯ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಕೃಷಿ ಭೂಮಿಯು ಮುಳುಗಡೆಯಾಗಿದ್ದು, ನೆರೆಯಿಂದ ಸುಮಾರು 6 ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ನೆರೆಯಲ್ಲಿ ಹೆಚ್ಚಿನ ಕೃಷಿ ಭೂಮಿಗೆ ಹಾನಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.