ಒಂದೇ ದಿನ ಮೂರು ಚಿನ್ನ ಕಳ್ಳ ಸಾಗಾಟ ಪತ್ತೆ
ಮಂಗಳೂರು: ದುಬೈಯಿಂದ ಭಾರತಕ್ಕೆ ವಿಮಾನದಲ್ಲಿ ರು. 65 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳಸಾಗಾಟ ನಡೆಯುತ್ತಿರುವುದನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
2.191 ಕಿಲೋ ಚಿನ್ನವನ್ನು ವಿದ್ಯುತ್ ಪ್ಲೇಟ್, ತಂತಿ, ಸ್ಪ್ರಿಂಗ್ ರೂಪದಲ್ಲಿ ತರುತ್ತಿದ್ದರು. ಕಾಸರಗೋಡು ಮಧೂರಿನ ಬಶೀದ್ವ ಚೂರಿ ಅಬ್ದುಲ್ ಜೆಟ್ ಏರ್ವೇಸ್ನಲ್ಲಿ ಮಂಗಳವಾರ ಬೆಳಗ್ಗಿನ ಜಾವ 29.78 ಲಕ್ಷ ಮೌಲ್ಯದ 13 ಚಿನ್ನದ ಕಾಯಿಲ್ಗಳನ್ನು ತಂದಿದ್ದ.
ಎರಡನೇ ಪ್ರಕರಣದಲ್ಲಿ ನಝರ್ ತೆಕ್ಕುಪುರಂ ಎಂಬಾತ ಬೆಳಗ್ಗೆ 7.45ಕ್ಕೆ ದುಬೈಯಿಂದ ಏರ್ಇಂಡಿಯಾ ಎಕ್ಸ್ಪ್ರೆಸ್ನಲ್ಲಿ 699 ಗ್ರಾಂ 20.85 ಲಕ್ಷ ಮೌಲ್ಯದ ಚಿನ್ನವನ್ನು ತಂತಿಗಳ ರೂಪದಲ್ಲಿ ಸೂಟ್ಕೇಸ್ನಲ್ಲಿ ಇಟ್ಟುಕೊಂಡಿದ್ದ.
ಮೂರನೇ ಪ್ರಕರಣದಲ್ಲಿ ಕಾಸರಗೋಡಿನ ಅಬ್ದುಲ್ ಸತ್ತಾರ್ ಎಂಬಾತ ದುಬೈಯಿಂದ ಏರ್ಇಂಡಿಯಾ ಎಕ್ಸ್ಪ್ರೆಸ್ನಲ್ಲಿ 14.7 ಲಕ್ಷ ಮೌಲ್ಯದ 491.650 ಗ್ರಾಂ ಚಿನ್ನವನ್ನು ತಂತಿಗಳ ರೂಪದಲ್ಲಿ ತಂದಿದ್ದ.
ಕಸ್ಟಮ್ಸ್ ಸಹಾಯಕ ಆಯುಕ್ತ ಕೃಷ್ಣ ಕುಮಾರ್ ಪ್ರಸಾದ್ ಮೂರು ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಇಧರಲ್ಲಿ ಬಶೀದ್ ಚೂರಿ ಅಬ್ದುಲ್ ಮತ್ತು ನಝರ್ ತೆಕ್ಕುಪುರಮ್ನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ. ಕಮಿಷನರ್ ಡಿ.ಪುರುಷೋತ್ತಮ್ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
---
ಆಸ್ಪತ್ರೆಗೆ ಹೋದ ದಂಪತಿ ನಾಪತ್ತೆ
ಬಂಟ್ವಾಳ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆಂದು ಕಳೆದ ಹತ್ತು ದಿನಗಳ ಹಿಂದೆ ತೆರಳಿದ್ದ ದಂಪತಿ ವಾಪಸ್ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾವಳಪಡೂರು ಗ್ರಾಮದ ಅಲಂಪುರಿ ಮನೆಯಿಂದ ನಾರಾಯಣ (45) ಮತ್ತು ಅವರ ಪತ್ನಿ ಪ್ರಮೀಳಾ (40) ನಾಪತ್ತೆಯಾದವರು.
ಜ.24ರಂದು ಇವರು ಆಲಂಪುರಿ ಮನೆಯಿಂದ ವೆನ್ಲಾಕ್ ಆಸ್ಪತ್ರೆಗೆ ಔಷಧಿಗೆಂದು ತೆರಳಿದವರು ಈವರೆಗೂ ವಾಪಸ್ ಬಂದಿಲ್ಲ ಎಂದು ಅವರ ತಂಗಿ ಮೀನಾಕ್ಷಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆ ದೂ. 08255- 235000 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

