ದಕ್ಷಿಣ ಕನ್ನಡ

ಮೂರ್ನಾಡು: ನವಜೀವನ ಸ್ವ ಸಹಾಯ ಸಂಘ ಕುಟುಂಬ ಸಭೆ

Published On :

ಮೂರ್ನಾಡು: ಕುಟುಂಬದ ಪ್ರತಿಯೊಬ್ಬ ಸದಸ್ಯರಲ್ಲೂ ಉಳಿತಾಯ ಮನೋಭಾವನೆ ಬೆಳೆಯಬೇಕು ಎಂದು ಮೂರ್ನಾಡು ಮಹಾರಾಷ್ಟ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ರಚನಾ ಪೂವಮ್ಮ ಹೇಳಿದರು.
ಮೂರ್ನಾಡಿನ ಕಿಡ್ಸ್ ಪ್ಯಾರಡೈಸ್ನಲ್ಲಿ ಆಯೋಜಿಸಲಾಗಿದ್ದ ಅಣ್ಣಪ್ಪ ಸ್ವಾಮಿ ನವಜೀವನ ಸ್ವ ಸಹಾಯ ಸಂಘದ ಕುಟುಂಬ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮಧ್ಯಮ ವರ್ಗ ಮತ್ತು ಬಡ ವರ್ಗದ ಪ್ರತಿಯೊಬ್ಬರೂ ಬ್ಯಾಂಕ್ನಲ್ಲಿ ಖಾತೆಗಳನ್ನು ತೆರೆಯುವುದರೊಂದಿಗೆ ಬ್ಯಾಂಕ್ಗಳಲ್ಲಿ ದೊರಕುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಬ್ಯಾಂಕುಗಳು ಎಲ್ಲಾ ರೀತಿಯಲ್ಲಿ ಸೇವೆ ನೀಡಲು ಸಿದ್ಧವಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬ್ಯಾಂಕ್ನ ಮತ್ತೊಬ್ಬ ವ್ಯಪಸ್ಥಾಪಕ ಕೆ. ಸೋಲೊಮನ್ ರವಿಕುಮಾರ್ ಮಾತನಾಡಿ, ಮನುಷ್ಯ ಜೀವನ ಅತ್ಯಮೂಲ್ಯವಾದುದು. ಇಂತಹ ಜೀವನದಲ್ಲಿ ಸಣ್ಣ ಕಾರಣಗಳಿಗಾಗಿ ಅತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಜೀವವಿದ್ದರೆ ಈಗಿನ ಕಾಲದಲ್ಲಿ ಬದುಕಲು ಅನೇಕ ದಾರಿಗಳಿವೆ ಎಂದು ಹೇಳಿದರು.
ಸಭೆಯಲ್ಲಿ ಬ್ಯಾಂಕ್ನ ಎಂ.ಬಿ. ತಿಮ್ಮಯ್ಯ ಮಾತನಾಡಿ ತಮ್ಮ ಬ್ಯಾಂಕಿನಲ್ಲಿ ದೊರಕುವ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷೆ ಜಾನಕಿ ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಮಹಾರಾಷ್ಟ್ರ ಬ್ಯಾಂಕಿನ ಅರುಣ್ ಅಸ್ಪಾನಸ್, ಟಿ.ಜೆ. ನಂದೀಶ್, ಕಿಡ್ಸ್ ಪ್ಯಾರಡೈಸ್ನ ವ್ಯವಸ್ಥಾಪಕಿ ಪೂರ್ಣಿಮಾ ಸುರೇಶ್, ಸಂಘದ ಕಾರ್ಯದರ್ಶಿ ನಿಶಾಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ ಜಲಜ ನಾಗರಾಜ್ ಸ್ವಾಗತಿಸಿದರು. ಜಾನಕಿ ಚಂಗಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.