ದಕ್ಷಿಣ ಕನ್ನಡ

'ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ'

Published On :

ಸಿದ್ದಾಪುರ: ಯುವ ಪೀಳಿಗೆ ವಿದ್ಯಾಭ್ಯಾಸದೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕೇರಳದ ಧಾರ್ಮಿಕ ಪಂಡಿತ ಅಬ್ದುಸ್ಸಮದ್ ಪೂಕೋಟರ್ ಹೇಳಿದರು.
ಕಾಸರಗೋಡುವಿನಲ್ಲಿ 14 ,15, 16 ರಂದು ಮೂರು ದಿನಗಳ ಕಾಲ ನಡೆಯುವ ಎಸ್.ವೈ.ಎಸ್.ನ 60ನೇ ಮಹಾ ಸಮ್ಮೇಳನದ ಅಂಗವಾಗಿ ವಿರಾಜಪೇಟೆ ಸಮೀಪದ ಪೆರಂಬಾಡಿಯ ಶಂಸುಲ್ ಉಲಮಾ ಯತೀಖಾನ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಚಾರ ಸಮ್ಮೇಳನವನ್ನು ಉದ್ಘಾಟಿಸಿ, ಮಾತನಾಡಿದರು.
ಯುವ ಪೀಳಿಗೆ ಸಂಘಟಿತ ರೂಪದಲ್ಲಿ ಉತ್ತಮ ಸಮಾಜ ಸ್ನೇಹಿ ಕಾರ್ಯದಲ್ಲಿ ತೊಡಗಬೇಕು. ಇದರೊಂದಿಗೆ ನಮ್ಮ ಆಚಾರವಿಚಾರ, ಸಂಸ್ಕೃತಿ, ಮಾನವೀಯತೆ ಸೌಹರ್ದತೆಗಳನ್ನು ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ತಿಳಿಸಿದರು.
ಕಾಸರಗೋಡಿನಲ್ಲಿ ನಡೆಯುವ ಸಮ್ಮೇಳನಕ್ಕೆ ಸಮುದಾಯದವರು ಹೆಚ್ಚಿನ ಸಂಖೆಯಲ್ಲಿ ತೆರಳಬೇಕು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಖಾಜಿ ಎಂ.ಎಂ. ಅಬ್ದುಲ್ಲಾ ಫೈಜಿ, ಎಸ್.ವೈ.ಎಸ್.ನ ಜಿಲ್ಲಾಧ್ಯಕ್ಷ ಪಿ.ವಿ.ಎಸ್. ಮತ್ತು ಕೋಯ ತಂಗಳ್, ಉಪಾಧ್ಯಕ್ಷ ನಾಣಿ ಹಾಜಿ, ಸಿದ್ದಾಪುರ ಮುಸ್ಲಿಂ ಜಮಾಯತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಎಸ್.ಕೆ.ಎಸ್.ಎಸ್.ಎಫ್.ನ ಜಿಲ್ಲಾಧ್ಯಕ್ಷ ಅಶ್ರಫ್ ಫೈಜಿ, ಸಂಸುಲ್ ಉಲಮ ಅಕಾಡೆಮಿ ಟ್ರಸ್ಟ್ನ ಅಬ್ದುಲ್ ರಹೆಮಾನ್, ಬಸೀರ್ ಹಾಜಿ, ಹಮೀದ, ಉಮ್ಮರ್ ಫೈಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.