ದಕ್ಷಿಣ ಕನ್ನಡ

ವಿದ್ಯಾರ್ಥಿನಿಯರಿಗೆ ಕಿರುಕುಳ; ದೂರು

Published On :

ಮಂಗಳೂರು: ವಳಚ್ಚಿಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸ್ಥಳೀಯರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಬುಧವಾರ ದೂರು ನೀಡಲಾಗಿದೆ.  ವಳಚ್ಚಿಲ್ ಕಾಲೇಜಿನ ವಿದ್ಯಾರ್ಥಿನಿಯರು ಪರಿಸರದ ಮನೆಗಳಲ್ಲಿ ಪೇಯಿಂಗ್ ಗೆಸ್ಟ್‌ಗಳಾಗಿ ವಾಸಿಸುತ್ತಿದ್ದಾರೆ. ಕೆಲವು ದಿನಗಳಿಂದ ಸ್ಥಳೀಯ ಪುಂಡು ಪೋಕರಿಗಳು ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದರು. ವಿದ್ಯಾರ್ಥಿನಿಯರು ಎಸ್‌ಎಂಎಸ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದರು. ಆಯುಕ್ತರ ಕಚೇರಿಯ ಪೊಲೀಸ್ ಸಿಬ್ಬಂದಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಯಾವುದೇ ಅಂಥ ಘಟನೆ ಕಂಡು ಬಾರದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ಆಧಾರ್ ಕೇಂದ್ರ 28ರ ವರೆಗೆ
ಮಂಗಳೂರು: ಜಿಲ್ಲೆಯ 8 ಆಧಾರ್ ನೋಂದಣಿ ಕೇಂದ್ರಗಳು ಆಧಾರ್ ಫೆ.28ರ ವರೆಗೆ ಕಾರ್ಯನಿರ್ವಹಿಸಲಿವೆ. ಮಂಗಳೂರು ಮಹಾನಗರ ಪಾಲಿಕೆ ಲಾಲ್‌ಬಾಗ್, ಕದ್ರಿ ಮಲ್ಲಿಕಟ್ಟೆಯ ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಸಮುದಾಯ ಭವನ ಉಳ್ಳಾಲ, ಮಹಾನಗರ ಪಾಲಿಕೆ ಉಪಕಚೇರಿ ಸುರತ್ಕಲ್, ಹಳೆ ತಾಲೂಕು ಪಂಚಾಯ್ತಿ ಕಟ್ಟಡ ಬಿ.ಸಿ.ರೋಡ್, ಪುರಭವನ/ಸಮುದಾಯ ಭವನ ಪುತ್ತೂರು, ಗ್ರಾಮ ಪಂಚಾಯ್ತಿ ಉಪ್ಪಿನಂಗಡಿ, ಮೂಲ್ಕಿ ನ.ಪಂ. ಇಲ್ಲಿ ನೋಂದಣಿ ನಿಧಾನಗತಿಯಲ್ಲಿದೆ. ನೋಂದಣಿ ಕಡಿಮೆಯಾದಲ್ಲಿ ಕೇಂದ್ರಗಳನ್ನು ಸ್ಥಳಾಂತರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

ಉಪ್ಪಿನಂಗಡಿ: ತುಂತುರು ಮಳೆ
ಉಪ್ಪಿನಂಗಡಿ: ಪಟ್ಟಣದ ಸುತ್ತಮುತ್ತ ಬುಧವಾರ ಅಕಾಲಿಕ ತುಂತುರು ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಸುಮಾರು ಅರ್ಧ ಗಂಟೆಗಳ ಕಾಲ ತುಂತುರು ಮಳೆ ಸುರಿಯಿತು. ಕೊಡೆಗಳಿಲ್ಲದ ಕಾರಣ ಜನತೆ ಅಂಗಡಿ ಮುಂಭಾಗವನ್ನೇ ಆಶ್ರಯಿಸಿದ್ದರೆ, ಬಿಸಿಲಿಗಾಗಿ ಕೊಡೆ ತಂದಿದ್ದ ಕೆಲರು ಕೊಡೆ ಹಿಡಿದು ಹೋಗುತ್ತಿದ್ದ ದೃಶ್ಯ ಕಂಡು ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.