ಇಂದು, ನಾಳೆ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಮಂಗಳೂರು: ಇದೇ ಮೊದಲ ಬಾರಿಗೆ ಫೆ. 14 ರಂದು ಬೆಂಗರೆಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್ ಹೇಳಿದ್ದಾರೆ.
ಅಳಿವೆ ಬಾಗಿಲಿನಲ್ಲಿ ಬುಧವಾರ ದೋಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
'ಸಾಹಿತ್ಯ ಪ್ರೇಮಿಗಳ ದಿನಾಚರಣೆ' ಶೀರ್ಷಿಕೆ ಮತ್ತು 'ಮಾನವ ಕುಲಂ ತಾನೊಂದೆ ವಲಂ' ಎಂಬ ಸದಾಶಯದೊಂದಿಗೆ ಸಾಹಿತಿ ನಾ. ಮೊಗಸಾಲೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಫೆ. 14 ರಂದು 5 ರಿಂದ 5.30ವರೆಗೆ ಅಧ್ಯಕ್ಷರೊಂದಿಗೆ ಸಮುದ್ರ ವಿಹಾರ ಕಾರ್ಯಕ್ರಮ ಮೆರವಣಿಗೆಯಂತೆ ನಡೆಯಲಿದೆ. ಫೆ. 15 ರಂದು ಬೆಳಗ್ಗೆ 6ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು. ನಮ್ಮ ಪರ್ಯಾಯ ದ್ವೀಪದಲ್ಲಿ ಈ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಬೆಂಗರೆ ಮಹಾಜನ ಸಭಾದ ಅಧ್ಯಕ್ಷ ಶೇಖರ ಸುವರ್ಣ ಹೇಳಿದರು.
ಸಮ್ಮೇಳನವನ್ನು ಫೆ. 14 ರಂದು ಸಂಜೆ 6ಕ್ಕೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಮತ್ತು ಗಿಲಿ ಗಿಲಿ ಮ್ಯಾಜಿಕ್ ಜ್ಯೂ. ಶಂಕರ್ ಉದ್ಘಾಟಿಸುವರು. ರಂಗಕರ್ಮಿ ಸುಕುಮಾರ್ ಮುದ್ರಾಡಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಡಾ. ಚಂದ್ರಶೇಖರ ದಾಮ್ಲೆ, ಚಂದ್ರಹಾಸ ರೈ, ಮೆಲ್ವಿನ್ ರೋಡ್ರಿಗಸ್, ಶೇಖರ ಸುವರ್ಣ, ಮೀರಾ ಕರ್ಕೇರಾ, ಮಲಾರ್ ಜಯರಾಮ ರೈ ಪಾಲ್ಗೊಳ್ಳುವರು.
ಮಕ್ಕಳ ಪ್ರತಿಭೋತ್ಸವ ಸಮ್ಮೇಳನದ ಕಾರ್ಯಕ್ರಮದಲ್ಲಿ ಉಡುಪಿಯ ಯಶ್ ಜೋಗಿ(ಯಕ್ಷಗಾನ), ಮೂಡುಬಿದಿರೆ ಹರ್ಷಾ ಕೋಟ್ಯಾನ್(ಕರಾಟೆ), ಕಾಸರಗೋಡು ಮಯೂರಿ ಮತ್ತು ಮನವಿ ಸಹೋದರಿಯರು(ನೃತ್ಯ), ಅನಿರುದ್ಧ ವಾಸಿಷ್ಠ ಶರ್ಮಾ(ಯಕ್ಷಗಾನ), ದಿವಿತ್ ಕೋಟ್ಯಾನ್(ತೆಂಕುತಿಟ್ಟು ಯಕ್ಷಗಾನ), ಅಭಿಲಾಷ್ ಕಿನ್ನಿಗೋಳಿ( ನೃತ್ಯ), ಮಹಾಲಕ್ಷ್ಮಿ ಉಪ್ಪಿನ ಕುದ್ರು,( ಭಾಷಣ), ಸಂಕೇತ್ ಬೆಂಗ್ರೆ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಭಾ ಗೌರವ ಸ್ವೀಕರಿಸುವರು.
ಮಹಿಳಾಗೋಷ್ಠಿ: ಮಹಿಳೆಯರ ಕುರಿತು ಬೆಳಕು ಚೆಲ್ಲುವ ಮಹಿಳಾಗೋಷ್ಠಿಯಲ್ಲಿ ಮೈಸೂರು ಸಿರಿಗನ್ನಡ ವೇದಿಕೆ ಮಹಿಳಾ ಘಟಕಾಧ್ಯಕ್ಷೆ ಪದ್ಮ ಮೋಹನ್ ಅಧ್ಯಕ್ಷತೆ ವಹಿಸುವರು. ಪ್ರೊ. ವಿನಿತಾ, ಡಾ.ಶೈಲಾ ಯು ವಿಚಾರ ಮಂಡಿಸುವರು. ತುಳು ಅಕಾಡೆಮಿಯ ಮಾಜಿ ಸದಸ್ಯೆ ರತ್ನಾವತಿ ಬೈಕಾಡಿ, ಉಪನ್ಯಾಸಕಿ ಮಲ್ಲಿಕಾ ಶೆಟ್ಟಿ, ಎಂ. ರಾವ್, ಕರುಣಾಕರ ಬಳ್ಕೂರು ಪಾಲ್ಗೊಳ್ಳುವರು.
ಬೆಳದಿಂಗಳ ಗೌರವ ಪ್ರದಾನ: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಡಾ. ಅಣ್ಣಯ್ಯ
ಕುಲಾಲ್, ಪ್ರೊ. ನರಸಿಂಹಮೂರ್ತಿ, ರಾಮಚಂದರ್ ಬೈಕಂಪಾಡಿ, ಯತೀಶ್, ಶ್ರೀನಿವಾಸ ಜೋಕಟ್ಟೆ ಸಮ್ಮೇಳನದ ಗೌರವವನ್ನು ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಬಾರಿಯ ಕರ್ನಾಟಕ ಸಾಹಿತ್ಯ ದಂಪತಿ ಗೌರವಕ್ಕೆ ಡಾ. ಗಣನಾಥ ಎಕ್ಕಾರು ಮತ್ತು ಡಾ.ನಿಕೇತನಾ ಆಯ್ಕೆಯಾಗಿದ್ದಾರೆ.
ನಾಡುನುಡಿ ಗೋಷ್ಠಿ: ಕಾಸರಗೋಡಿನ ಪತ್ರಕರ್ತ ಕವಿ ರಾಧಾಕೃಷ್ಣ ಉಳಿಯತಡ್ಕ ಅಧ್ಯಕ್ಷತೆ ಮತ್ತು ಡಾ. ಗಣನಾಥ ಎಕ್ಕಾರು, ಪಿ.ಬಿ ಹರೀಶ ರೈ, ವಿತೋರಿ ಕಾರ್ಕಳ ಪಾಲ್ಗೊಳ್ಳುವಿಕೆಯಲ್ಲಿ ನಾಡು ನುಡಿಯ ಬಗೆಗಿನ ವಿಚಾರ ಮಂಥನ ನಡೆಯಲಿದೆ ಎಂದರು. ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಧ್ಯಕ್ಷ ಯತೀಶ್ ಬಿ., ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಮೀರಾ ಕರ್ಕೇರ, ಮಹಾಜನ ಸಭಾದ ಪ್ರಧಾನ ಕಾರ್ಯದರ್ಶಿ ಸಂಜಯ ಸುವರ್ಣ ಇದ್ದರು.
ಮೊಗಸಾಲೆಗೆ ಸಚಿವ ಆಹ್ವಾನ : ಸಮ್ಮೇಳನಾಧ್ಯಕ್ಷ ಡಾ.ನಾ. ಮೊಗಸಾಲೆ ಅವರಿಗೆ ಯುವಜನ ಮತ್ತು ಕ್ರೀಡೆ ಸಚಿವ ಕೆ.ಅಭಯಚಂದ್ರ ಜೈನ್ ವೀಳ್ಯ ನೀಡಿ ಸ್ವಾಗತ ಕೊರಿದರು. ಕಾಂತಾವರ ಕನ್ನಡ ಸಂಘದ ಕನ್ನಡ ಭವನ ಸ್ಥಾಪನೆಯಲ್ಲಿ ಅಭಯ ತೋರಿದ ಆಸಕ್ತಿ ಮತ್ತು ಅದಕ್ಕಾಗಿ ಅವರು ಮಾಡಿದ ಪರಿಶ್ರಮವನ್ನು ಮೊಗಸಾಲೆ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

