ಕ್ರೌರ್ಯದತ್ತ ಚಿಂತನೆ ದುರಂತ: ಮೊಗಸಾಲೆ
ಪುತ್ತೂರು (ರಾಮಚಂದ್ರ ದೇವ ವೇದಿಕೆ, ಅನುರಾಗ ವಠಾರ): ಮನುಷ್ಯ ಸಂಬಂಧ ನಾಶವಾಗುತ್ತ ನಮ್ಮ ಚಿಂತನೆಗಳು ಕ್ರೌರ್ಯದತ್ತ ವಾಲುತ್ತಿರುವುದು ಇಂದಿನ ದುರಂತವಾಗಿದ್ದು ಹಿಟ್ಲರ್, ಮೋದಿಯನ್ನು ಬಯ್ಯುವ ನಾವು ಕ್ರೌರ್ಯದಲ್ಲಿ ಯಾವ ಹಂತದಲ್ಲಿದ್ದೇವೆ ಎಂಬುದನ್ನು ಸ್ವತಃ ಅರಿತುಕೊಳ್ಳುವ ಅಗತ್ಯವಿದೆ ಎಂದು ಸಾಹಿತಿ, ಸಂಘಟಕ ಕಾಂತಾವರದ ಡಾ. ನಾ.ಮೊಗಸಾಲೆ ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರಿನ ಅನುರಾಗ ವಠಾರದಲ್ಲಿ ಕರ್ನಾಟಕ ಸಂಘ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಫೆ. 23ರ ತನಕ ನಡೆಯಲಿರುವ 'ಸಾಹಿತ್ಯ ಕಲಾಕುಶಲೋಪರಿ-11' ಕಾರ್ಯಕ್ರಮದಲ್ಲಿ ಭಾನುವಾರ ಕರ್ನಾಟಕ ಸಂಘದಿಂದ ಕೊಡಮಾಡಲ್ಪಟ್ಟ 'ಅನುರಾಗ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆಮತ್ತು ದೇವರ ಕುರಿತು ನಂಬಿಕೆಯಿಲ್ಲದ ತಾನು ತನ್ನ ಬದುಕಿನ ಎಲ್ಲಾ ಅನುಭವಗಳನ್ನು 'ಬಯಲ ಬೆಟ್ಟ' ಕೃತಿಯಲ್ಲಿ ಯಾವುದೇ ಅಂಜಿಕೆ ಮುಲಾಜುಗಳಿಲ್ಲದೆ ತಿಳಿಸಿದ್ದೇನೆ. ತನ್ನದು ಏಕಾಂತವಾದವಲ್ಲ ಅನೇಕಾಂತ ವಾದವಾಗಿದ್ದು ಡಾ. ಶಿವರಾಮ ಕಾರಂತರು ತನ್ನ ಆರಾಧ್ಯ ದೈವವಾದರೆ ಬೋಳಂತಕೋಡಿ ತನಗೆ ಆದರ್ಶ ಎಂದರು.
ಭಾಷಾ ಅಸ್ಪೃಶ್ಯತೆ ಸಲ್ಲದು:ಸಾಂಸ್ಕೃತಿಕ ದಿವಾಳಿತನ ತುತ್ತ ತುದಿಯಲ್ಲಿರುವ ಇಂದಿನ ದಿನಗಳಲ್ಲಿ ಭಾಷೆಯಲ್ಲಿಯೂ ಅಸ್ಪೃಶ್ಯತೆ ಮಾಡಲಾಗುತ್ತಿದೆ ಎಂದ ಮೊಗಸಾಲೆ, ವಿಶ್ವ ತುಳು ಸಮ್ಮೇಳನದಲ್ಲಿ ಶಿವಳ್ಳಿ ಬ್ರಾಹ್ಮಣರ ತುಳು ಭಾಷೆಗೆ ಗೌರವ ನೀಡಲಾಗಿಲ್ಲ. ಭಾಷಾ ವಿಚಾರದಲ್ಲಿ ಅಸ್ಪೃಶ್ಯತೆ ಸರಿಯಲ್ಲ ಎಂದರು.
ಡಾ. ಮೊಗಸಾಲೆ ಅವರನ್ನು ಅಭಿನಂದಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ, ದುಡ್ಡಿನ ಮೂಲಕ ಪ್ರಶಸ್ತಿ ಅಳೆಯುವ, ಸಾರ್ವಜನಿಕ ಭೋಜನದಂತೆ ಪ್ರಶಸ್ತಿ ಹಂಚುವ, ಕ್ಯೂನಲ್ಲಿ ನಿಂತು ಪ್ರಶಸ್ತಿ ಪಡೆಯುವ ವ್ಯವಸ್ಥೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿಯೂ ಕಾಂತಾವರದಲ್ಲಿ ನೀಡಲಾಗುವ ವರ್ಧಮಾನ, ಮುದ್ದಣ ಇಂತಹ ಪ್ರಶಸ್ತಿಗಳು ತನ್ನ ಗೌರವ ಘನತೆಯನ್ನು ಉಳಿಸಿಕೊಂಡಿವೆ. ಡಾ. ಮೊಗಸಾಲೆ ನಾಲ್ಕಾರು ಅಕಾಡಮಿಗಳು ಮಾಡುವ ಕೆಲಸವನ್ನು ತಾವೊಬ್ಬರೇ ಮಾಡುತ್ತಿದ್ದಾರೆ ಎಂದರು.
ಪುತ್ತೂರು ಮಕ್ಕಳ ಮಂಟಪದ ನಿರ್ದೇಶಕ ಡಾ.ಎನ್. ಸುಕುಮಾರ ಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ಪ್ರಶಸ್ತಿ ಪತ್ರ ವಾಚಿಸಿದರು. ಕರ್ನಾಟಕ ಸಂಘದ ಕಾರ್ಯದರ್ಶಿ ಡಾ. ಎಚ್.ಜಿ. ಶ್ರೀಧರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

