ಪಿಲಿಕುಳದಲ್ಲಿ ಆನೆಗೆ ನಿತ್ಯ ಕಸರತ್ತು
ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆನೆ ಮಹಾಲಕ್ಷ್ಮಿಗೆ ಪಿಲಿಕುಳ ನಿಸರ್ಗ ಧಾಮದಲ್ಲಿ ತಿಂಗಳಿಂದ ಸಮತೂಲಿತ ಆಹಾರ ಮತ್ತು ದೈಹಿಕ ಕಸರತ್ತು ನೀಡಲಾಗುತ್ತಿದೆ. ಬೊಜ್ಜು ಹೆಚ್ಚಾಗಿ ಅನಾರೋಗ್ಯ ಪೀಡಿತಳಾಗಿದ್ದ ಮಹಾಲಕ್ಷ್ಮಿ ಇದೀಗ ವ್ಯಾಯಾಮದಿಂದ ಚೇತರಿಸಿಕೊಳ್ಳುತ್ತಿದ್ದಾಳೆ.
ಆನೆ ದೇಹದಲ್ಲಿರುವ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಲು ಕೇರಳದ ಗಜಪಡೆಯ ವೈದ್ಯರು ವಿಶೇಷ ಯಂತ್ರದೊಂದಿಗೆ ಮಂಗಳೂರಿಗೆ ಶೀಘ್ರ ಬರಲಿದ್ದಾರೆ. ರೋಗ ಪತ್ತೆಯಾದ ಬಳಿಕ ಚಿಕಿತ್ಸೆ ನೀಡಲಾಗುವುದು ಎಂದು ಪಿಲಿಕುಳ ನಿಸರ್ಗ ಧಾಮದ ನಿರ್ದೇಶಕ ಜೆ.ಪಿ. ಭಂಡಾರಿ ತಿಳಿಸಿದ್ದಾರೆ.
ಆನೆಗೆ ನಿತ್ಯ ವಾಕಿಂಗ್ ಮಾಡಲಾಗುತ್ತಿದೆ. ಆನೆಗಳ ಆಹಾರವಾದ ಹುರುಳಿ, ಸೊಪ್ಪು, ಕಬ್ಬು ಸಹಿತ ಸಮತೋಲಿತ ಆಹಾರ ನೀಡಲಾಗುತ್ತಿದೆ.
ಆನೆ ಈಗ ಸ್ವಲ್ಪ ಚುರುಕಾಗಿದೆ. ಆನೆ ದೇಹ ಸಂಪೂರ್ಣ ಸ್ಕ್ಯಾನಿಂಗ್ ಮಾಡಲು ಕೇರಳದಿಂದ ವೈದ್ಯರು ಬರಲಿದ್ದಾರೆ ಎಂದು ಭಂಡಾರಿ ತಿಳಿಸಿದ್ದಾರೆ.
ಕಟೀಲು ಕ್ಷೇತ್ರದ ಆನೆ ಮಹಾಲಕ್ಷ್ಮಿ ಭಕ್ತರು ಕೊಟ್ಟ ತೆಂಗಿನಕಾಯಿ, ಬಾಳೆ ಹಣ್ಣು ಸೇವನೆ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆನೆ ಮಾವುತನಿಗೂ ಸರಿಯಾಗಿ ಉರ್ದು ಬಾರದೆ ಇದ್ದ ಹಿನ್ನೆಲೆಯಲ್ಲಿ ಆನೆಯ ನೋವು ನಲಿವುಗಳಿಗೆ ಸ್ಪಂದಿಸುವ ಸಮಸ್ಯೆಯೂ ಎದುರಾಗಿತ್ತು. ಆನೆಗೆ ಕಾಡಿನಲ್ಲಿ ವಾಕಿಂಗ್ ಮಾಡಿಸಬೇಕು. ಇಲ್ಲಿ ಆನೆಗೆ ವ್ಯಾಯಾಮ ಸಿಗದೆ ಬೊಜ್ಜು ಹೆಚ್ಚಾಗಿತ್ತು. ಬೆದೆಗೂ ಬಂದಿರಲಿಲ್ಲ. ಗಂಡಾನೆ ಆಕರ್ಷಿಸಲು ಬೊಜ್ಜು ಕರಗಿಸಿಕೊಂಡು ಸ್ಲಿಮ್ ಆಗಲು ಮಹಾಲಕ್ಷ್ಮಿಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕಳುಹಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

