ರಸ್ತೆ ದುರಸ್ತಿ ಆಗ್ರಹಿಸಿ ಅಹೋರಾತ್ರಿ ಧರಣಿ
ಪುತ್ತೂರು: ಮುಡಿಪಿನಡ್ಕ- ಮೈಂದನಡ್ಕ- ಸುಳ್ಯಪದವಿನ ಕೇರಳ ಗಡಿಭಾಗದವರೆಗೆ ಹಾಗೂ ಸುಳ್ಯ ಪದವು- ಪದಡ್ಕ- ಈಶ್ವರಮಂಗಲ ರಸ್ತೆಗೆ ಸಂಪೂರ್ಣ ಡಾಂಬರೀಕರಣವನ್ನು ತಕ್ಷಣ ನಡೆಸಬೇಕೆಂದು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ಶನಿವಾರದಿಂದ ಬಡಗನ್ನೂರು ಪಂಚಾಯತ್ ಎದುರುಗಡೆ ಅಹೋರಾತ್ರಿ ನಿರಂತರ ಧರಣಿ ನಡೆಸಿದರು.
ಶನಿವಾರ ಬೆಳಗ್ಗೆ 8.30ಕ್ಕೆ ಆಗಮಿಸಿದ ಸಾರ್ವಜನಿಕರು ಬಡಗನ್ನೂರು ಪಂಚಾಯಿತಿ ಎದುರು ರಸ್ತೆ ಬದಿ ಸಮಾವೇಶಗೊಂಡು ಧರಣಿ ಆರಂಭಿಸಿದರಲ್ಲದೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಕುರಿತು ಚರ್ಚಿಸುವವರೆಗೆ ಧರಣಿಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಒಮ್ಮತದ ನಿರ್ಧಾರ ಕೈಗೊಂಡರು. ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿಯ ಚಂದ್ರಶೇಖರ ಆಳ್ವ, ಕಳೆದ 35 ವರ್ಷಗಳಿಂದ ಈ ರಸ್ತೆಗೆ ಡಾಂಬರು ಕಾಮಗಾರಿ ನಡೆದಿಲ್ಲ. ಈ ರಸ್ತೆಯಿಡೀ ಹೊಂಡಗಳಿಂದ ತುಂಬಿ ಹೋಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ ಎಂದರು.
ನಾಗರಿಕ ಹೋರಾಟ ಸಮಿತಿಯ ಮುಖಂಡ ನಾಗರಾಜ್ ಭಟ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಂ. ನಾಗರಾಜ್ ಸುಳ್ಯಪದವು, ಹಿರಿಯ ಹೋರಾಟಗಾರ ಶರವು ಕೃಷ್ಣಯ್ಯ, ನಾಗರಾಜ್ ಕೆ.ಎಂ., ಚಂದ್ರಶೇಖರ ಆಳ್ವ, ನಿತ್ಯಾನಂದ ನಾಯಕ್ ಇಂದಾಜೆ, ಶ್ರೀರಾಂ ಭಟ್, ರವೀಶ್ ಪಡುಮಲೆ, ನಾರಾಯಣ ಪೂಜಾರಿ ಮುಡಿಪಿನಡ್ಕ, ಸಂತೋಷ್ ಆಳ್ವ, ಸುಂದರ, ಉದಯ, ಅನಿಲ್ ಕುಮಾರ್, ಎಸ್.ಎಲ್. ನಾಯಕ್ ಇಂದಾಜೆ, ಶೀಲಾ ಕನ್ನಡ್ಕ, ಶ್ರೀಕಲಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

