ದಕ್ಷಿಣ ಕನ್ನಡ

ಪೊಲೀಸರಿಗಿನ್ನು ಬ್ಯಾನರ್ ಕಾಯುವ ಕೆಲಸ!

Published On :

ಮೂಲ್ಕಿ:  ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾನರ್ ಹರಿದು ಹಾಕುವ ಪ್ರಕರಣಗಳು ಹೆಚ್ಚುತ್ತಿದ್ದು, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪೊಲೀಸರಿಗೆ ಇನ್ನು ಮುಂದೆ ಬ್ಯಾನರ್ ಕಾಯುವ ಕೆಲಸ ಹೆಚ್ಚುವರಿಯಾಗಿ ಸಿಗಲಿದೆ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭ ಎರಡು ಪಕ್ಷಗಳ ನಡುವೆ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಇದೀಗ ಪಕ್ಷಗಳ ನಡುವಿನ ವೈಷಮ್ಯ ಹೆಚ್ಚಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಕೆಲವು ಕಡೆ ನರೇಂದ್ರ ಮೋದಿ ಅವರ ಬ್ಯಾನರನ್ನು ಹಾಗೂ ಇನ್ನು ಕೆಲವೆಡೆ ಕಾಂಗ್ರೆಸ್ ನಾಯಕರ ಶುಭ ಹಾರೈಸುವ ಬ್ಯಾನರನ್ನು ಹರಿಯುವ ಕಾರ್ಯ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ, ಪ್ರತ್ಯಾರೋಪಗಳಲ್ಲಿ ನಿರತವಾಗಿವೆ.
ಇತ್ತೀಚೆಗೆ ಕೆಂಚನಕೆರೆ ತಿರುವಿನಲ್ಲಿ ಅಂಗರಗುಡ್ಡೆ ಬಳಿ ನರೇಂದ್ರ ಮೋದಿ ಅಭಿಮಾನಿ ಬಳಗದವರು ಹಾಕಿದ್ದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಅದೇ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಕುರಿತು ಹಾಕಿದ ಬ್ಯಾನರನ್ನು ಹರಿದು ಹಾಕಲಾಗಿತ್ತು. ಬಳಿಕ ಪ್ರಕರಣ ಠಾಣೆ ಮೆಟ್ಟಲೇರಿ ಎರಡು ಕೋಮಿನವರು ಆರೋಪ- ಪ್ರತ್ಯಾರೋಪ ಮಾಡಿದ್ದರು. ಇದೇ ರೀತಿ ಕುಬೆವೂರು ಕ್ರಾಸ್ ಬಳಿ, ಪಡುಪಣಂಬೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಶನಿವಾರ ರಾತ್ರಿ ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಸುಮಾರು 10 ಬ್ಯಾನರ್‌ಗಳನ್ನು ಹರಿದು ಹಾಕಿದ ಘಟನೆ ನಡೆದಿದೆ.
ಸ್ಥಳೀಯ ಪಂಚಾಯಿತಿಗಳು ಬ್ಯಾನರ್ ಅಳವಡಿಸಲು ಬೇಕಾಬಿಟ್ಟಿ ಪರವಾನಗಿ ನೀಡುತ್ತಿರುವುದರಿಂದ ಸಮಸ್ಯೆ ಉದ್ಭವವಾಗಿದೆ. ಪರವಾನಗಿ ನೀಡದಿದ್ದರೆ ಇಂತಹ ಘಟನೆಗಳನ್ನು ತಡೆಯುಲು ಸಾಧ್ಯ ಎನ್ನುವುದು ಸ್ಥಳೀಯರ  ಅಭಿಪ್ರಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.