ದಕ್ಷಿಣ ಕನ್ನಡ

ಕೊಂಕಣಿ ಲಿಪಿ ಸಮಸ್ಯೆ ಹೋರಾಟದ ಹಾದಿ ತುಳಿಯಬಹುದು

Published On :

ಮಂಗಳೂರು: ಕೊಂಕಣಿ ಭಾಷೆ 6 ಲಿಪಿಯನ್ನು ಒಳಗೊಂಡಿದ್ದರೂ, ಶಿಕ್ಷಣದಲ್ಲಿ ದೇವನಾಗರಿಯನ್ನು ಮಾತ್ರ ಪರಿಗಣಿಸಲಾಗಿದೆ. ಇದು ಮುಂದೆ ಹೋರಾಟ ಹಾದಿ ಹಿಡಿಯುವ ಸಾಧ್ಯತೆಯಿದೆ. ಸಮಸ್ಯೆ ಹೋಗಲಾಡಿಸುವುದು ಸಹಭಾಷಿಗರ ಹೊಣೆಗಾರಿಕೆ ಎಂದು ಭಾಷಾ ತಜ್ಞ ಡಾ.ಕೆ.ವಿ. ನಾರಾಯಣ್ ಹೇಳಿದರು.
 ಬುಧವಾರ ಪಥ ದರ್ಶಿನಿ ಸೇವಾ ಟ್ರಸ್ಟ್ ವತಿಯಿಂದ ಶಕ್ತಿನಗರದ ಕಲಾಂಗಣದಲ್ಲಿ ನಡೆದ ಇಂಗ್ಲಿಷ್-ಕನ್ನಡ-ಕೊಂಕಣಿ ಶಬ್ಧಕೋಶ ಬಿಡುಗೊಳಿಸಿ ಮಾತನಾಡಿದರು.
 ಕರ್ನಾಟಕದಲ್ಲಿ ಲಂಬಾಣಿ, ತುಳು, ಕೊಂಕಣಿ, ಕೊಡಗು ಸೇರಿದಂತೆ 51 ಸಮುದಾಯಗಳು ಬೇರೆ ಭಾಷೆ ಮಾತಾಡುತ್ತಾರೆ. ಆದರೆ ಇವರಿಗೆ ದ್ವಿಭಾಷಿಗರಾಗುವಂತೆ ಒತ್ತಡ ಹೇರಲಾಗುತ್ತದೆ. ಆದರೆ ಕನ್ನಡಿಗರು ಮಾತ್ರ ಸಹಭಾಷೆಯನ್ನು ಕಲಿಯುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಶಬ್ಧಕೋಶ ಇದಕ್ಕೆ ಸಹಕಾರಿಯಾಗಲಿದೆ ಎಂದರು.
 21ನೇ ಶತಮಾನದಲ್ಲಿ ಏಕಭಾಷಿಕರು ಬದುಕು ಸಾಗಿಸಲು ಕಷ್ಟವಿದೆ. ಬಹುಭಾಷಿಕ ಗುಣ ಜೀವವೈವಿಧ್ಯ ಮತ್ತು ಮನುಷ್ಯನ ಭೌದ್ಧಿಕತೆಯ ಸಂಕೇತ ಎಂದರು. ಇಂಗ್ಲಿಷ್- ಕೊಂಕಣಿ ಶಬ್ಧಕೋಶವನ್ನು ಬಿಡುಗಡೆಗೊಳಿಸಿದ ಸಾಹಿತಿ ನಾ. ಡಿಸೋಜ ಮಾತನಾಡಿ, ಕೊಂಕಣಿಯ 50 ಸಾವಿರ ಶಬ್ಧಗಳಿಗೆ ಕನ್ನಡ, ಇಂಗ್ಲಿಷ್‌ನಲ್ಲಿ ಅರ್ಥ ಕೊಡಲಾಗಿರುವ ಶಬ್ಧಕೋಶ ಪುಸ್ತಕ ರಚನೆ ಮುಂದೆ ಕೊಂಕಣಿ ಭಾಷಾ ಬೆಳವಣಿಗೆಗೆ ಪೂರಕವಾಗಲಿದೆ. ಕೊಂಕಣಿ ಭಾಷೆ ಪೋರ್ಚುಗೀಸರಿಂದ ಕಷ್ಟಕ್ಕೊಳಗಾಗಿದ್ದು, 3 ಭಾಷೆಯಲ್ಲಿ ಅರ್ಥಕೋಶ ಸಿದ್ಧಪಡಿಸಿರುವುದು ಅಪರೂಪ ಎಂದರು.
 ಇಂಗ್ಲಿಷ್-ಕನ್ನಡ ಶಬ್ಧಕೋಶ ಬಿಡುಗಡೆಗೊಳಿಸಿದ ಲೇಖಕಿ ಸಾ.ರಾ. ಅಬೂಬಕ್ಕರ್ ಮಾತನಾಡಿ, ಶಬ್ಧಕೋಶಗಳು ವಿವಿಧ ಭಾಷೆಯನ್ನು ಕಲಿಯಲು ಸ್ಪೂರ್ತಿ ನೀಡುತ್ತದೆ. ಇದಕ್ಕೆಲ್ಲಾ ವಿದೇಶಿಗರು, ಕ್ರೈಸ್ತ ಸಮುದಾಯ ನೀಡಿದ ಕೊಡುಗೆಗಳೇ ಕಾರಣ ಎಂದರು.
 ಮಂಗಳೂರು ಧರ್ಮಪ್ರಾಂತ್ಯ ಅಧ್ಯಕ್ಷ ಡಾ. ಅಲೋಶಿಯಸ್ ಪೌಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೋವಾ ವಿಶ್ವವಿದ್ಯಾಲಯ ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಿಯದರ್ಶಿನಿ ತಾಡ್‌ಕೊಡ್ಕರ್, ಅರ್ಥಕೋಶ ಮುಖ್ಯಸಂಪಾದಕ ಸ್ಟೀಫನ್ ಕ್ವಾಡ್ರಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.