10 ದಿನಗಳ ಕಾಲ ಮಂಗಳೂರಲ್ಲಿ ಪುಸ್ತಕ ಮೇಳ
ಮಂಗಳೂರು: ಬುದ್ಧಿವಿಕಾಸ ಆಗಬೇಕಾದರೆ ಜಗತ್ತು ಸುತ್ತಿ ಪುಸ್ತಕ ಓದಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. ವಿಶ್ವ ಕೊಂಕಣಿ ಕೇಂದ್ರ ಸಹಯೋಗದಲ್ಲಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ಪ್ರಾರಂಭವಾದ 10 ದಿನಗಳ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ 'ಮಂಗಳೂರು ಪುಸ್ತಕ ಮೇಳ'ಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ಆಧುನಿಕ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಕಂಪ್ಯೂಟರ್ ಮತ್ತು ಟಿವಿಯಿಂದ ಈ ದುರ್ಗತಿ ಬಂದಿದ್ದು, ಗ್ರಂಥಾಲಯಗಳು ಕೂಡ ಮುಚ್ಚುವ ಸ್ಥಿತಿಗೆ ಬರುತ್ತಿರುವುದು ಖೇದಕರ ಎಂದರು. ಬಸ್ತಿ ವಾಮನ ಶೆಣೈ, ಅಮಿತ್ ಕರ್ಕಿ, ನಾಗರಾಜಪ್ಪ, ಗೋಕುಲದಾಸ ಪ್ರಭು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಜರಿದ್ದರು.
ಎದುರಿಗೇ ಸಿಕ್ಕಿದ ಕಾಡಾನೆ: ಇಬ್ಬರು ಬಚಾವ್!
ಸುಬ್ರಹ್ಮಣ್ಯ: ಇಲ್ಲಿನ ಹರಿಹರ ಪಲ್ಲತ್ತಡ್ಕದ ಕೊಪ್ಪತ್ತಡ್ಕ ಎಂಬಲ್ಲಿ ಕಾರ್ಯಕ್ರಮಕ್ಕೆಂದು ಬೈಕ್ನಲ್ಲಿ ತೆರಳುತಿದ್ದ ಸ್ಥಳೀಯರಿಬ್ಬರಿಗೆ ಕಾಡಾನೆಯೊಂದು ಸೇತುವೆ ಮೇಲೆ ಎದುರಾಗಿ, ಯುವಕರಿಬ್ಬರೂ ಓಡಿ ತಪ್ಪಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ದೋಣಿಪಳ್ಳ ನೇಮಿಚಂದ್ರ ಮತ್ತು ಕುಕ್ಕುಂದ್ರಡ್ಕ ಚೇತನ ಎಂಬವರು ದೇವರುಳಿಯದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬೈಕ್ನಲ್ಲಿ ತೆರಳುತಿದ್ದರು. ಕೊಪ್ಪತ್ತಡ್ಕ ಕಿರಿ ಸೇತುವೆ ಮೇಲೆ ಬೈಕ್ ಸಾಗುತಿದ್ದಂತೆ ಎದುರಿನಿಂದ ತೆಂಗಿನ ಗರಿಯನ್ನು ಎಳೆದುಕೊಂಡು ಕಾಡಾನೆ ಬರುತ್ತಿರುವುದು ಕಂಡಿತು. 4-5 ಮೀಟರ್ ದೂರದಲ್ಲೇ ಕಾಡಾನೆ ಎದುರಾಗಿತ್ತು. ತಕ್ಷಣವೇ ತಬ್ಬಿಬ್ಬಾದ ಇವರಿಬ್ಬರು ಬೈಕ್ ತಿರುಗಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಬೈಕನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿ ಅಪಾಯದಿಂದ ಬಚಾವಾದರು. 'ಅದೃಷ್ಟವಶಾತ್ ಕಾಡಾನೆ ಬೈಕನ್ನು ಕಂಡು ಅಲ್ಲಿಂದಲೇ ಹಿಂತಿರುಗಿದೆ. ಒಂದು ವೇಳೆ ಓಡಿಸಿಕೊಂಡು ಬಂದಿದ್ದರೆ ನಾವು ಪ್ರಾಣಾಪಯಕ್ಕೆ ಒಳಗಾಗುತಿದ್ದೆವು' ಎಂದು ಚೇತನ್ ಅನುಭವ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

