ದಕ್ಷಿಣ ಕನ್ನಡ

ಚೋರಿಯರಿಂದ ರು. 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

Published On :

ಮಂಗಳೂರು: ತಮಿಳುನಾಡು ಮೂಲದ ಮಹೇಶ್ವರಿ(32), ನಾಗು(22) ಮಹಿಳಾ ಚೋರರನ್ನು ಸೋಮವಾರ ಮುಂಜಾನೆ ಪಾಂಡೇಶ್ವರ ಓಲ್ಡ್ ಕೇಟ್ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದು, ರು. 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಪಾಂಡೇಶ್ವರದಲ್ಲಿ ಮುಂಜಾನೆ ಅನುಮಾನಸ್ಪಾದವಾಗಿ ತಿರುಗಾಡುತ್ತಿದ್ದ ಇವರನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ಮಹಿಳೆಯರು ಪಾಂಡೇಶ್ವರ ರೈಲ್ವೆ ಹಳಿಗಳ ಬಳಿಯ ಪೊದೆಯಲ್ಲಿ ಅಡಗಿಸಿಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
2013ರಲ್ಲಿ ದೇರೆಬೈಲ್ ನಿವಾಸಿ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯೊಬ್ಬರ ಕತ್ತಿನ ಸರ ಬಸ್ಸಿನಲ್ಲಿ ತಿಳಿಯದಂತೆ ಎಗರಿಸಿದ್ದರು. ನವೆಂಬರ್ನಲ್ಲಿ ಪಾಂಡೇಶ್ವರ ಶಿವನಗರದ ನಾಗಬನದ ಬಳಿಯಿರುವ ಮನೆಯೊಂದರಲ್ಲಿ ಕದ್ದಿರುವುದಾಗಿ ತನಿಖೆ ಸಂದರ್ಭ ಹೇಳಿದ್ದಾರೆ.
ಇವರು ಟೆಂಟ್ಗಳಲ್ಲಿ ವಾಸಿಸುತ್ತಿದ್ದು, ತಾವು ಕದ್ದ ವಸ್ತುಗಳನ್ನು ತಮ್ಮ ಗಂಡಂದಿರ ಮೂಲಕ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.