ಬಸ್ಸಲ್ಲಿ ಯುವತಿ ಬಳಿ ಕುಳಿತ ಯುವಕಗೆ ಏಟು
ಸುಳ್ಯ: ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಬಸ್ನಲ್ಲಿ ಒಂದೇ ಸೀಟಿನಲ್ಲಿ ಇದ್ದ ಯುವಕ- ಯುವತಿ ಬಗ್ಗೆ ಅನುಮಾನಗೊಂಡ ಕೆಲವರು ಸಂಘಟನೆಯೊಂದರ ಯುವಕರಿಗೆ ಕರೆ ಮಾಡಿ ತಿಳಿಸಿದ ಮೇರೆಗೆ ಕೆಲ ಯುವಕರು ಬಸ್ನಲ್ಲಿದ್ದ ಯುವಕನನ್ನು ಬಸ್ನಿಂದ ಕೆಳಗಿಳಿಸಲು ಪ್ರಯತ್ನಿಸಿದ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಗೂನಡ್ಕದ ಕಮರುದ್ದೀನ್ ಎಂಬಾತ ಬೆಂಗಳೂರಿಗೆ ಹೋಗಿ ಭಾನುವಾರ ರಾತ್ರಿ ಹಿಂತಿರುಗುತ್ತಿದ್ದಾಗ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಊರಿಗೆ ಹೊರಟಿದ್ದ ಗೂನಡ್ಕದ ಯುವತಿ ಬೆಂಗಳೂರು ಬಸ್ ನಿಲ್ದಾಣದಲ್ಲಿ ಸಿಕ್ಕಿ ಒಂದೇ ಬಸ್ನಲ್ಲಿ ಹೊರಟರು. ಅವರು ಒಂದೇ ಸೀಟ್ನಲ್ಲಿ ಅಕ್ಕ ಪಕ್ಕ ಕುಳಿತಿದ್ದುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕಲ್ಲುಗುಂಡಿಯ ಸಂಘಟನೆಯೊಂದರ ಯುವಕರಿಗೆ ಫೋನ್ ಮೂಲಕ ತಿಳಿಸಿದರು ಎನ್ನಲಾಗಿದೆ. ಬಸ್ಸು ಮುಂಜಾನೆ 4 ಗಂಟೆಗೆ ಸಂಪಾಜೆ ಗೇಟ್ ತಲುಪಿದಾಗ ಕೆಲವು ಯುವಕರು ಬಸ್ ಹತ್ತಿ ಈ ಯುವಕ- ಯುವತಿಯನ್ನು ಹುಡುಕಿ ಪತ್ತೆ ಹಚ್ಚಿದರು. ತಾವು ಜತೆಗೆ ಬಂದವರಲ್ಲವೆಂದೂ, ಕಂಡಕ್ಟರ್ ನಿರ್ದೇಶನದ ಪ್ರಕಾರ ಅಕ್ಕಪಕ್ಕದ ಸೀಟಲ್ಲಿ ಕುಳಿತಿದ್ದಾಗಿ ಯುವಕ ಹೇಳಿದರೂ ಒಪ್ಪದ ಯುವಕರು ಬಸ್ನಿಂದ ಆತನನ್ನು ಕೆಳಗೆಳೆದರು. ಆದರೆ ಆತ ಕೆಳಗಿಳಿಯಲು ಒಪ್ಪಲಿಲ್ಲ. ಅಲ್ಲಿದ್ದ ಸಂಪಾಜೆ ಪೊಲೀಸರು ಆಕ್ರೋಶಿತ ಯುವಕರನ್ನು ಸಮಾಧಾನಿಸಿದರು. ಬಳಿಕ ಅವರಿಬ್ಬರೂ ಗೂನಡ್ಕಕ್ಕೆ ಬಂದು ಬಸ್ನಿಂದ ಇಳಿದರು. ಅಲ್ಲಿ ಮಗಳನ್ನು ಕರೆದುಕೊಂಡು ಹೋಗಲು ತಂದೆ ಕಾದು ನಿಂತಿದ್ದರು. ಅವರೊಡನೆ ಮತ್ತು ಊರ ಇತರರೊಡನೆ ಯುವಕ- ಯುವತಿ ನಡೆದ ಘಟನೆಯನ್ನು ವಿವರಿಸಿದರು.
ಬಳಿಕ ಪೆರುಂಗೋಡಿ ಜಗದೀಶ್ ಮತ್ತಿತರರು ಮಹಮ್ಮದ್ ಕುಂಞ ಗೂನಡ್ಕ ಹಾಗೂ ಕಮರುದ್ದೀನ್ ತಾಯಿಯೊಡನೆ ಮಾತನಾಡಿ ಪೊಲೀಸ್ ದೂರು ಕೊಡದೆ ಸೌಹಾರ್ದಯುತವಾಗಿ ವಿಷಯವನ್ನು ಮುಗಿಸುವಂತೆ ಹೇಳಿದರೂ, ಕಮರುದ್ದೀನ್ ಮಡಿಕೇರಿಗೆ ಹೋಗಿ ಪೊಲೀಸ್ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

