ದಕ್ಷಿಣ ಕನ್ನಡ

ಐಕಳ: ಜಲ್ಲಿ ಕ್ರಶರ್ ವಿರುದ್ಧ ಹೋರಾಟ ಸಮಿತಿ ರಚನೆ

Published On :

ಮೂಲ್ಕಿ: ಐಕಳ ಗ್ರಾಮ ಪಂಚಾಯಿತಿಯ  ನೆಲ್ಲಿಗುಡ್ಡೆಯಲ್ಲಿ ಆರಂಭಿಸಲಿರುವ ಬೃಹತ್ ಗಾತ್ರದ ಕ್ರಶರ್ ಯಂತ್ರವನ್ನು ಅಳವಡಿಸುವ ಬಗ್ಗೆ ಐಕಳದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು ಹೋರಾಟ ಸಮಿತಿ ರಚನೆಯಾಗಿದೆ.
ಐಕಳದಲ್ಲಿ ಜರುಗಿದ ಗ್ರಾಮಸ್ಥರ ಸಭೆಯಲ್ಲಿ ಜಲ್ಲಿ ಕ್ರಶರ್ ವಿರುದ್ಧ ಹೋರಾಟ ನಡೆಸಲು ಐಕಳ ಬಾವಾ ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಐಕಳ ಗ್ರಾಮ ಹೋರಾಟ ಸಮಿತಿ ರಚಿಸಲಾಯಿತು.
ಯಾಕೆ ಹೋರಾಟ?: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಸಣ್ಣ ಜಲ್ಲಿ ಕ್ರಶರ್ ಕ್ವಾರಿಗಳಿದ್ದು ನೆಲ್ಲಿಗುಡ್ಡೆಯಲ್ಲಿರುವ ಉದ್ಯಮಿಯೊಬ್ಬರು ಜಲ್ಲಿ ಕ್ರಶರ್ಗೆ ಬೃಹತ್ ಗಾತ್ರದ ಜಲ್ಲಿ ಕ್ರಶರ್ ಯಂತ್ರ ತರಿಸಿದ್ದು ಅದರಿಂದ ಬೃಹತ್ ಪ್ರಮಾಣದಲ್ಲಿ ಜಲ್ಲಿ ತಯಾರಾಗುವುದರ ಜೊತೆಗೆ ಸಮೀಪದ ಮನೆಗಳು ಬಿರುಕು ಬಿಡುವ ಸಾಧ್ಯತೆಯಿದ್ದು ಜೊತೆಗೆ ಪರಿಸರಕ್ಕೆ ಹೆಚ್ಚಿನ ಹಾನಿಯಾಗುವ ಸಾಧ್ಯತೆಯಿದೆ.
ಇದಕ್ಕೆ ಅವಕಾಶ ನೀಡದಂತೆ ನೆಲ್ಲಿಗುಡ್ಡೆ ಗ್ರಾಮಸ್ತರು ಪಂಚಾಯಿತಿಯನ್ನು ಒತ್ತಾಯಿಸಿದರು. ಐಕಳ ಪಂಚಾಯಿತಿಯಲ್ಲಿ ಜರುಗಿದ ವಿಶೇಷ ಗ್ರಾಮಸಭೆಯಲ್ಲಿ ಐಕಳ ಪಂಚಾಯಿತಿ ವ್ಯಾಪ್ತಿಯ ಎಲ್ಲಾ 12 ಜಲ್ಲಿ ಕ್ರಶರ್ಗಳಿಗೆ ಮುಂದಿನ ಮಾರ್ಚ್ ವರೆಗೆ ಅನುಮತಿ ನೀಡಲಾಗಿದ್ದರೂ ಗ್ರಾಮಸ್ಥರ ಮನವಿಯಂತೆ ಪರವಾನಗಿ ತಾತ್ಕಾಲಿಕವಾಗಿ  ತಡೆ ಹಿಡಿಯಲಾಗಿತ್ತು.
ರಾಜಕೀಯ ವ್ಯಕ್ತಿಗಳ ಮೇಲೆ ಒತ್ತಡ ತಂದು ಪುನಃ ಉದ್ಯಮ ಪ್ರಾರಂಭಿಸುವ ಸಾಧ್ಯತೆಯಿರುವುದರಿಂದ ಐಕಳ ಗ್ರಾಮಸ್ಥರು ಸಭೆ ಸೇರಿಸಿ ಈ ಬಗ್ಗೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಿದರು.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಐಕಳಬಾವಾ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಮೊಬೈಲ್ ಕ್ರಶರ್ನಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಿದ್ದು ಈಗಾಗಲೇ ಧೂಳಿನಿಂದ ಅಸ್ತಮ ಮುಂತಾದ ರೋಗಗಳು ಹರಡಿದ್ದು ಸಮೀಪದ ಮನೆಗಳು ಬಂಡೆಕಲ್ಲಿನ ಶಬ್ದದಿಂದ ಕುಸಿಯುವ ಹಂತಕ್ಕೆ ತಲುಪಿದೆ. ಕ್ರಶರ್ ವಿರುದ್ಧ ರಾಜಕೀಯ ರಹಿತ ಹೋರಾಟ ನಡೆಸುವುದಾಗಿ ತಿಳಿಸಿದರು.
ನ್ಯಾಯವಾದಿ ಐಕಳ ಮುರಳೀಧರ ಶೆಟ್ಟಿ, ಸ್ವರಾಜ್ ಶೆಟ್ಟಿ, ಆಮ್ ಆದ್ಮಿ ಪಕ್ಷದ ರೋಬರ್ಟ್ ರೊಸಾರಿಯೋ, ಐಕಳ ಜಯಪಾಲ ಶೆಟ್ಟಿ, ಚಿತ್ತರಂಜನ್ ಭಂಡಾರಿ, ಐಕಳ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.