24 ಸಾವಿರ ಮಹಿಳೆಯರ ನಾಪತ್ತೆ; ರಾಜ್ಯ ಸರ್ಕಾರ ಕಡೆಗಣನೆ
ಮಂಗಳೂರು: ಕರ್ನಾಟಕದಲ್ಲಿ ಒಟ್ಟು 24 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದರೂ, ಸರ್ಕಾರ ಮತ್ತು ಕಾನೂನು ಪ್ರಕರಣದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷೆ ಮಮತಾ ಯಾದವ್ ಆರೋಪಿಸಿದರು.
ದೇರಳಕಟ್ಟೆ ವಿದ್ಯಾರ್ಥಿನಿ ಮೇಲಾದ ಅತ್ಯಾಚಾರ, ಅಪಹರಣ, ಬೆದರಿಕೆ ಘಟನೆ ಖಂಡಿಸಿ ಜಾಗೃತ ಮಹಿಳಾ ವೇದಿಕೆ ವತಿಯಿಂದ ಗುರುವಾರ ಕೇಂದ್ರ ಮೈದಾನದಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.
ದೇರಳಕಟ್ಟೆ ಘಟನೆಯಲ್ಲಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುವದರ ಹಿಂದೆ ರಾಜಕೀಯ ಕೈವಾಡ ಇರುವುದು ತಿಳಿದು ಬರುತ್ತದೆ. ಆದ್ದರಿಂದ ಇಂಥ ಸರ್ಕಾರವನ್ನು ಹೊಡೆದೊಡಿಸಬೇಕು ಎಂದರು.
ಎಬಿವಿಪಿ ಸದಸ್ಯೆ ಅಶ್ವಿನಿ ಮಾತನಾಡಿ, ದೌರ್ಜನ್ಯ ನಡೆಸಿದವರಿಗೆ ಶಿಕ್ಷೆ ಆಗಲೂ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವ ಕೋರ್ಟ್ ವೈಖರಿಯೇ ಇಂಥ ಘಟನೆ ಮರುಕಳಿಸಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಾಲಭವನ ಮಾಜಿ ಅಧ್ಯಕ್ಷೆ ಸುಲೋಚನಾ ಭಟ್ ಮಾತನಾಡಿ, ಪಬ್, ಹೋಂ ಸ್ಟೇಗಳಿಗೆ ದಾಳಿ ಮಾಡಿದ ಹಿಂದೂ ಕಾರ್ಯಕರ್ತರ ವಿರುದ್ಧ ಧ್ವನಿ ಎತ್ತಿದ್ದ ಮಹಿಳಾ ಆಯೋಗ, ಮಹಿಳಾವಾದಿಗಳು, ಸಂಘಟನೆಗಳು, ಸಚಿವರು ಇಂದು ದೇರಳಕಟ್ಟೆ ಘಟನೆಯಲ್ಲಿ ಮೌನವಾಗಿರುವುದು ದುರಾದೃಷ್ಟಕರ ಎಂದರು.
ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಎನ್ನುವಂತೆ ಒಂದು ಕೋಮಿನ ವರ್ಗವನ್ನು ರಕ್ಷಿಸುವ ಮೂಲಕ ಮತಬ್ಯಾಂಕ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಯಿತು. ದೇರಳಕಟ್ಟೆ ಪ್ರಕರಣ ಸಾಮಾನ್ಯ ಅಪರಾಧವಾಗಿರದೆ ಇದೊಂದು ವ್ಯವಸ್ಥಿತ ಸಂಘಟಿತ ಜಾಲವೆಸಗಿದ ಕೌರ್ಯ. ಆದ್ದರಿಂದ ಇವರ ವಿರುದ್ಧ ಗೂಂಡಾ ಕಾಯ್ದೆ ಹೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಡಿ 20 ವರ್ಷ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೊಳಗಾದ ಹೆಣ್ಣುಮಗಳಿಗೆ ನ್ಯಾಯಾಲಯ ಸೂಕ್ತ ರಕ್ಷಣೆ, ಧೈರ್ಯ ತುಂಬಬೇಕು. ಮುಂದೆ ಇಂಥ ಕೃತ್ಯ ನಡೆಯದಂತೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಪಡೆ ರಚಿಸಬೇಕು. ಇಂಥ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಲು ಮುಕ್ತ ಅವಕಾಶ ಕಲ್ಪಿಸಬೇಕು. ಇದಕ್ಕೆ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ವೇದಿಕೆ ಗೌರವಾಧ್ಯಕ್ಷೆ ಡಾ. ಕಮಲಾ ಪ್ರಭಾಕರ್ಭಟ್ ಸರ್ಕಾರವನ್ನು ಆಗ್ರಹಿಸಿದರು.
ಸಭೆಯಲ್ಲಿ ಒಡಿಯೂರು ಸಂಸ್ಥಾನದ ಮಾತಾನಂದಮಯಿ, ಸಂಸ್ಕೃತ ಸಂಶೋಧಕಿ ಎಸ್.ಆರ್. ಲೀಲಾ, ವಕೀಲೆ ಆಶಾಪ್ರಸಾದ್ ಭಟ್, ವೇದಿಕೆ ಸಹಸಂಚಾಲಕಿ ಆಶಾ ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

