ಗೋ ರಕ್ಷಣೆ ಅಗತ್ಯ: ಪೇಜಾವರ ಸ್ವಾಮೀಜಿ
ಬ್ರಹ್ಮಾವರ: ಪ್ರತಿಯೊಬ್ಬರೂ ಮಾನವೀಯ ದೃಷ್ಟಿಯಿಂದ ಗೋವುಗಳನ್ನು ರಕ್ಷಿಸಲೆಬೇಕೆಂದು ಗೋವಕ್ಷಿಸನಗಿರಿ ವಿಶ್ವಸ್ತ ಮಂಡಳಿ ಗೌರವಾಧ್ಯಕ್ಷ, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ದಶಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿರುವ ನೀಲಾವರ ಗೋಶಾಲೆಯಲ್ಲಿ ಭಾನುವಾರ ಗೋಸಂರಕ್ಷಣೆ ಬಗ್ಗೆ ನಡೆದ ಸರ್ವಧರ್ಮ ಮಠಾಧೀಶರ ಸಮ್ಮೇಳನ ಉದ್ಘಾಟಿಸಿ, 33 ಕೋಟಿ ದೇವತೆಗಳ ವಾಸಸ್ಥಾನವಾಗಿರುವ ಗೋವುಗಳ ರಕ್ಷಣೆಯ ದೀಕ್ಷೆ ತೊಡುವ ಅನಿವಾರ್ಯತೆ ಎಲ್ಲರಲ್ಲೂ ಬೆಳೆಯಬೇಕು ಎಂದರು. ಒಡಿಯೂರು ಗುರುದೇವ ದತ್ತಪೀಠಮ್ನ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಸಮಾಜದ ಸವಾಲುಗಳಲ್ಲಿ ಗೋರಕ್ಷಣೆಯೂ ಒಂದು. ಮನುಷ್ಯನ ಆಸೆಗೆ ಕಡಿವಾಣವೇ ಇಲ್ಲದ ಈ ಸಮಯದಲ್ಲಿ ಗೋಶಾಲೆಗಳ ಮೂಲಕ ಗೋವುಗಳ ರಕ್ಷಣೆ ಆಗುತ್ತದೆ ಎಂದು ಪೇಜಾವರ ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಗೋವುಗಳ ಸಂರಕ್ಷಣೆಗೆ ಮನಸ್ಸು, ಬುದ್ಧಿ, ತ್ಯಾಗ, ಸೇವೆಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಕಟಪಾಡಿಯ ಕಾಳಹಸ್ತೇಂದ್ರ ಸ್ವಾಮೀಜಿ, ಮಾಣಿಲದ ಮೋಹನದಾಸ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕನ್ಯಾಡಿಯ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಕೊಲ್ಯದ ರಮಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಸಂಸ್ಥಾನದ ರಾಜಶೇಖರಾನಂದ ಸ್ವಾಮೀಜಿ, ಹೊಸ್ಮಾರು ಬೊಲ್ಯೆಟ್ಟಿನ ವಿಖ್ಯಾತನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಯೋಗಾನಂದ ಸರಸ್ವತೀ ಸ್ವಾಮೀಜಿ, ಕರಿಂಜ ರಾಘವೇಂದ್ರ ಪೀಠದ ಮುಕ್ತಾನಂದ ಸ್ವಾಮೀಜಿ, ಬನ್ನಂಜೆ ರಾಘವೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

