ದಕ್ಷಿಣ ಕನ್ನಡ

'ಕೋಲಾರಕ್ಕೆ ಮಳೆಯಿಂದಲೇ ಕುಡಿವ ನೀರು ಕೊಡಿ'

Published On :

12 ಸಾವಿರ ಕೋಟಿ ಬದಲು 2 ಸಾವಿರ ಕೋಟಿಯಲ್ಲಿ ಕುಡಿವ ನೀರು ಪೂರೈಕೆ ಯೋಜನೆ
ಮಂಗಳೂರು: 'ಎತ್ತಿನಹೊಳೆ ಯೋಜನೆ ಜಾರಿ ದೋಷಪೂರಿತವಾಗಿದ್ದು, ಅಪ್ರಸ್ತುತ ಯೋಜನೆ. ಆದ್ದರಿಂದ ಈ ಯೋಜನೆ ಜಾರಿಗೊಳಿಸುವ ಬದಲು ಕೋಲಾರಕ್ಕೆ ಮಳೆ ನೀರಿನಿಂದಲೇ ಕುಡಿವ ನೀರಿನ ಯೋಜನೆ ಕೈಗೆತ್ತಿಕೊಳ್ಳಿ'. ಹೀಗೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದು ಸಾಮಾಜಿಕ ಕಾರ್ಯಕರ್ತರಾದ ಕಟೀಲು ದಿನೇಶ್ ಪೈ ಮತ್ತು ಎಚ್. ಸುಂದರ ರಾವ್.
ಎತ್ತಿನಹೊಳೆ ಯೋಜನೆ ಉದ್ದೇಶಪೂರ್ವಕವಾಗಿ ತಪ್ಪು ಲೆಕ್ಕಾಚಾರದಿಂದ ರಚನೆಯಾಗಿದೆ. ಯೋಜನೆಯಲ್ಲಿ ಪ್ರಸ್ತಾಪಿಸಿದ ಪ್ರಮಾಣದಷ್ಟು (24.1 ಟಿಎಂಸಿ) ನೀರು ಸಂಗ್ರಹವಾಗುವುದಿಲ್ಲ. ಅದರಿಂದ ಕೋಲಾರಕ್ಕಾಗಲೀ, ಚಿಕ್ಕಬಳ್ಳಾಪುರಕ್ಕಾಗಲೀ ಕಿಂಚಿತ್ ಕೂಡ ನೀರು ಸಿಗುವುದಿಲ್ಲ.  ಆದ್ದರಿಂದ ಈ ಜಿಲ್ಲೆಗಳಲ್ಲಿ ಮಳೆ ನೀರಿನಿಂದಲೇ ಕುಡಿವ ನೀರಿನ ಯೋಜನೆ ಮಾಡಬೇಕು. ಕೋಲಾರದಲ್ಲಿ ವಾರ್ಷಿಕ 780 ಮಿಲಿ ಮೀಟರ್ ಮಳೆ ಬರುತ್ತಿದ್ದು, ಅದಕ್ಕಿಂತ ಕಡಿಮೆ ವಾರ್ಷಿಕ ಮಳೆಯಾಗುವ ಒಳನಾಡು ಪ್ರದೇಶಗಳು ದೇಶದಲ್ಲಿ ಹಲವು ಇವೆ. ಅಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದಿಲ್ಲ ಎನ್ನುವುದನ್ನು ಬೊಟ್ಟು ಮಾಡಿದ್ದಾರೆ.
ಎತ್ತಿನಹೊಳೆ ಯೋಜನೆಯಲ್ಲಿ ನೀರನ್ನು 370 ಮೆ. ವ್ಯಾಟ್ ವಿದ್ಯುತ್ ಉಪಯೋಗಿಸಿ ಪಂಪ್ ಮಾಡಬೇಕು. ನಿರ್ವಹಣಾ ವೆಚ್ಚ ಸಹಿತ ಇತರೆ ವೆಚ್ಚ ಸೇರಿ ವಾರ್ಷಿಕ ರು. 1,200 ಕೋಟಿ ನೀರು ಸರಬರಾಜಿಗೆ ಬೇಕು. ಅದರ ಬದಲು ಇದಕ್ಕೆ ವೆಚ್ಚ ಮಾಡಲುದ್ದೇಶಿಸಿದ ರು. 12 ಸಾವಿರ ಕೋಟಿಯಿಂದ ಕೇವಲ ರು. 2 ಸಾವಿರ ಕೋಟಿ ಉಪಯೋಗಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಥಳೀಯ ನೀರಿನಿಂದ ಕುಡಿವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕು. ಆಗ ಅಲ್ಲಿನ ಜನರಿಗೆ ಕಡಿಮೆ ದರದಲ್ಲಿ ನೀರು ಸಿಗಲು ಸಾಧ್ಯ ಎಂದಿದ್ದಾರೆ. ವಿವಿಧ ಇಲಾಖೆಗಳಿಂದ ಅನುಮತಿ ಬಾಕಿ ಇರುವುದರಿಂದ ಈ ಯೋಜನೆಗೆ ಜ.31ರಂದು ಶಂಕುಸ್ಥಾಪನೆ ನೆರವೇರಿಸುವುದು ಹಾಸ್ಯಾಸ್ಪದ ಛಎಂದು ಹೇಳಿಕೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.