ದಕ್ಷಿಣ ಕನ್ನಡ

ದೇಶದ ಉಳಿವಿಗೆ ಯೋಗ್ಯ ನಾಯಕತ್ವ ಅಗತ್ಯ: ಯಡಿಯೂರಪ್ಪ

Published On :

ಸುಳ್ಯ: ದೇಶದ ಉಳಿವಿಗಾಗಿ ಸೈನಿಕರು ಹೇಗೆ ಹೋರಾಡುತ್ತಾರೆಯೋ ಹಾಗೆಯೇ ದೇಶದ ಉಳಿವಿಗಾಗಿ ಲೋಕಸಭೆ ಚುನಾವಣೆಯ ಮಹಾಸಮರ ಪ್ರಾರಂಭವಾಗಿದೆ. ಆ ಹೋರಾಟದಲ್ಲಿ ದೇಶದ ಏಳಿಗೆಗಾಗಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಜಾಗೃತಿ ಮೂಡಿಸುವ ಕೆಲಸ ನಮ್ಮದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಕಷ್ಟದಲ್ಲಿ ದೇಶ: ಈಗಿನ ದೇಶದ ಆಡಳಿತ ವ್ಯವಸ್ಥೆಯಿಂದ ದೇಶ ಸಂಕಷ್ಟಕ್ಕೀಡಾಗಿದೆ. ಉಗ್ರಗಾಮಿಗಳ ಅಟ್ಟಹಾಸ ತಾಂಡವವಾಡುತ್ತಿದ್ದು, ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋದರೆ ಪುನಃ ಮನೆಗೆ ಬರುತ್ತಾರೆಂಬ ನಂಬಿಕೆ ಇಲ್ಲದಂತಾಗಿದೆ. ದೇಶದಲ್ಲಿ ಭೀತಿ ತುಂಬಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ಕೂಡಲೆ ಪಾಕಿಸ್ತಾನ ಮೋದಿಯನ್ನು ಜೀವಂತ ಬಿಡುವುದಿಲ್ಲವೆಂದು ಸಮರ ಸಾರಿದೆ. ಇಂತಹ ಸನ್ನವೇಶದಲ್ಲಿ ದೇಶ ಬದುಕಿದೆಯೇ ಎಂಬ ಸಂಶಯ ನಮ್ಮಲ್ಲಿ ಉಂಟಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ಎಸ್. ಅಂಗಾರ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಮಡ್ತಿಲ, ಬಿಜೆಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರತಾಪ ಸಿಂಹ ನಾಯಕ್, ಸುಳ್ಯ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಪಂ ಸದಸ್ಯ ಎನ್.ಎ. ರಾಮಚಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯ ದುಗ್ಗಪ್ಪ ಗೌಡ ಬಳ್ಳಡ್ಕ, ಡಿ.ಎಸ್. ಗಿರೀಶ್, ನವೀನ್ ಕುಮಾರ್ ಕುದ್ಪಾಜೆ, ತಿರುಮಲೇಶ್ವರ ಕಲ್ಲುಮುಟ್ಲು, ಜಯಾಕೃಷ್ಣ ಬೆಟ್ಟ, ಲತಾ ಹೆಗ್ಡೆ ಇದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಜನಾರ್ದನ ಗೌಡ ಸೂಂತೋಡು ಯಡಿಯೂರಪ್ಪ ಅವರನ್ನು ಹೂಮಾಲೆ ಹಾಕಿ ಬರಮಾಡಿಕೊಂಡರು. ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ಟಿ. ಕುಸುಮಾಧರ ವಂದಿಸಿದರು. ಅರ್ಚಕ ಗಣೇಶ್‌ಕೃಷ್ಣ ದೀಕ್ಷಿತ್ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.