ಅತ್ತೂರು ಚರ್ಚ್ನಲ್ಲಿ ಭಿಕ್ಷುಕರ ಹಬ್ಬ
ಕಾರ್ಕಳ: ಅತ್ತೂರು ಸೈಂಟ್ ಲಾರೆನ್ಸ್ ಕ್ಷೇತ್ರದಲ್ಲಿ ಶುಕ್ರವಾರ ಭಿಕ್ಷುಕರ ಹಬ್ಬ ಆಚರಿಸಲಾಯಿತು. ಪತ್ರಿ ವರ್ಷ ಅತ್ತೂರು ಜಾತ್ರೆ (ಸಂತ್ಮಾರಿ) ಮರುದಿನ ಕ್ಷೇತ್ರದಲ್ಲಿ ಭಿಕ್ಷುಕರ ಹಬ್ಬ ನಡೆಯುತ್ತದೆ. ಸಂತ್ಮಾರಿಯ ಸಂದರ್ಭದ ಮೂರು ದಿನಗಳ ಕಾಲ ಕ್ಷೇತ್ರದ ಪರಿಸರದಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಿ, ಭಿಕ್ಷುಕರಿಗಾಗಿ ಪ್ರತ್ಯೇಕ ಕಾಣಿಕೆ ಡಬ್ಬಿಯನ್ನು ಇರಿಸಲಾಗುತ್ತದೆ. ಭಿಕ್ಷಕರ ಹಬ್ಬದ ದಿನ ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾದ ಹಣವನ್ನು ಭಿಕ್ಷಕರಿಗೆ ಹಂಚಲಾಗುತ್ತದೆ. ಸುಮಾರು 2200ಕ್ಕೂ ಅಧಿಕ ಮಂದಿ ಭಿಕ್ಷಕುಕರು ಭಾಗವಹಿಸಿದ್ದ ಹಬ್ಬದಲ್ಲಿ ಕ್ಷೇತ್ರದ ನಿರ್ದೇಶಕ ರೆ.ಫಾ. ಜಾರ್ಜ್ ಡಿ' ಸೋಜಾ ಭಿಕ್ಷಕುಕರ ಪರವಾಗಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಚನ ನೀಡಿದರು. ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಆರ್. ಡಿ' ಸಿಲ್ವ, ಕಾರ್ಯದರ್ಶಿ ರಿಚರ್ಡ್ ಪಿಂಟೋ, ಸಂತೋಷ್ ಡಿ' ಸಿಲ್ವ, ವೆಲೆರಿಯನ್ ಪಾಯಸ್, ಜಾಜೆಫ್ ಡಿ' ಸೋಜಾ, ವಿಲಿಯಂ ಕ್ಯಾಸ್ತಲಿನೋ, ಕೆಥೊಲಿಕ್ ಸಭಾದ ಅಧ್ಯಕ್ಷ ಲಿಯೋ ಪಿರೇರಾ ಇದ್ದರು. ಈ ಬಾರಿ ಅಂಗವಿಕಲರು ಹಾಗೂ ಭಿಕ್ಷುಕರಿಗೆ ಒಟ್ಟು ಸುಮಾರು ರು. 8,30,541 ಅನ್ನು ಹಂಚಲಾಯಿತು. ಚರ್ಚ್ನ ಪಾಲನಾ ಮಂಡಳಿ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

