ಅನಿಲ ಸಾಗಣೆ ಟ್ಯಾಂಕರ್ ಹರಿದು ಬಾಲಕ ಸಾವು
ಉಪ್ಪಿನಂಗಡಿ: ರಾ.ಹೆ. 75 ದಾಟುತ್ತಿದ್ದ ಬಾಲಕನ ಮೇಲೆ ಅನಿಲ ಸಾಗಣೆ ಟ್ಯಾಂಕರ್ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಸಾಯಂಕಾಲ ಇಲ್ಲಿನ ಮಠ ಸಮೀಪದ ಹಿರ್ತಡ್ಕ ಎಂಬಲ್ಲಿ ಸಂಭವಿಸಿದೆ.
ಮಠದ ನಿವಾಸಿ ಅಶ್ರಫ್ ಎಂಬವರ ಮಗ ಅಸ್ಲಾಂ (9) ಮೃತಪಟ್ಟ ಬಾಲಕ.
ಸಾಯಂಕಾಲ ಗೆಳೆಯರೊಡನೆ ಆಟವಾಡಲೆಂದು ಮನೆಯಿಂದ ಹೊರಬಂದವನು, ಹೆದ್ದಾರಿ ದಾಟುವ ಯತ್ನದಲ್ಲಿದ್ದಾಗ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಬಾಲಕನ ಮೇಲೆಯೇ ಚಲಿಸಿತು. ಈ ಪರಿಣಾಮ ಗಂಭೀರ ಗಾಯಗೊಂಡು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದನು.
ಕೂಲಿ ಕಾರ್ಮಿಕ ಅಶ್ರಫ್ ಅವರ ನಾಲ್ಕು ಮಕ್ಕಳಲ್ಲಿ ಕೊನೆಯವನಾದ ಅಸ್ಲಾಂ ಮಠದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ.
ಉದ್ರಿಕ್ತರಿಂದ ಹಲ್ಲೆ: ಬಾಲಕನನ್ನು ಬಲಿತೆಗೆದುಕೊಂಡ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಮೇಲೆ ಸ್ಥಳೀಯ ಜನತೆ ಆಕ್ರೋಶಗೊಂಡು ಹಲ್ಲೆ ನಡೆಸಿದ ಘಟನೆ ನಡೆಯಿತು.
ಸ್ಥಳಕ್ಕಾಗಮಿಸಿದ ಪೊಲೀಸರು ಸಕಾಲಿಕ ಕ್ರಮ ಕೈಗೊಂಡು ಉದ್ರಿಕ್ತರಿಂದ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ನನ್ನು ರಕ್ಷಿಸಿದರು. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

