ಕುಮಾರಧಾರಾ ಸೇತುವೆ ಸಂಚಾರಕ್ಕೆ ಮುಕ್ತ
ಸುಬ್ರಹ್ಮಣ್ಯ: ಘಟ್ಟದ ಮೇಲೆ ಮತ್ತು ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಕಳೆದ 4 ದಿನಗಳಿಂದ ಸತತ ಸುರಿಯುತ್ತಿರುವ ಭಾರಿ ಮಳೆಯ ಪ್ರಮಾಣದಲ್ಲಿ ಸೋಮವಾರ ತುಸು ಇಳಿಕೆಯಾಗಿದೆ. ಈ ಮಧ್ಯೆ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರಿಗೆ ಸೋಮವಾರ ಸೇತುವೆ ಸಂಚಾರ ಮುಕ್ತವಾಗಿತ್ತು. ಸುಬ್ರಹ್ಮಣ್ಯ ಅಸುಪಾಸಿನಲ್ಲಿ ಕೂಡ ಸಾಮಾನ್ಯ ಮಳೆ ಸುರಿದಿದೆ.
ಬೆಳಕಿಲ್ಲದೆ ಗೃಹ ರಕ್ಷಕ ಸಿಬ್ಬಂದಿ ಪರದಾಟ: ಪ್ರತಿ ಬಾರಿ ಮಳೆಗಾಲದ ಆರಂಭದ ಹೊತ್ತಿಗೆ ಮುಳುಗಿ ಸಂಪರ್ಕ ಕಡಿತಗೊಳ್ಳುವ ಕುಮಾರಧಾರೆ ಸೇತುವೆಯ ಇಕ್ಕೆಡೆಗಳಲ್ಲಿ ಭದ್ರತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮತ್ತು ಗೃಹ ರಕ್ಷಕದಳದವರನ್ನು ನಿಯೋಜಿಸಲಾಗುತ್ತದೆ. ಆದರೆ, ಇವರಿಗೆ ಅಗತ್ಯ ಸೌಕರ್ಯ ಒದಗಿಸದೆ ನಿರ್ಲಕ್ಷ್ಯಿಸಲಾಗಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ದಡದ 2 ಬದಿ ಗೃಹ ರಕ್ಷಕ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ. ಇವರಿಗೆಂದು 2 ಕಡೆ ಶೆಡ್ಗಳನ್ನು ನಿರ್ಮಿಸಲಾಗಿದೆ. ಈ ಶೆಡ್ಗಳು ಅಸಮರ್ಪಕವಾಗಿದ್ದು, ಮಳೆಗೆ ಸೋರುತ್ತಿದೆ.
ಬೆಳಕಿನ ವ್ಯವಸ್ಥೆ ಇಲ್ಲದೆ ಸಿಬ್ಬಂದಿ ರಾತ್ರಿ ಹಗಲು ಕತ್ತಲಿನಲ್ಲಿ ಬ್ಯಾಟರಿ ಟಾರ್ಚ್ ಹಿಡಿದು ಕರ್ತವ್ಯ ನಿರ್ವಹಿಸಬೇಕಿದೆ. ಹೀಗಾಗಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಇವರು ರಾತ್ರಿ ವೇಳೆ ಬೆಳಕಿಲ್ಲದೆ ಪರದಾಡುವಂತಾಗಿದೆ. ಈ ಸಿಬ್ಬಂದಿಗೆ ದೇವಸ್ಥಾನದ ವತಿಯಿಂದ ಮಳೆ ರಕ್ಷಣೆಗೆ 8 ಜೊತೆ ರೈನ್ ಕೋಟ್ ಮತ್ತು 2 ಟಾರ್ಚ್ ನೀಡಿದ್ದು ಬಿಟ್ಟರೆ ಸಂಬಂಧಿಸಿದವರು ಇನ್ಯಾವುದೇ ಸವಲತ್ತನ್ನು ಕಲ್ಪಿಸಿಲ್ಲ. ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟವರು ಇವರಿಗೆ ಕರ್ತವ್ಯ ನಿರ್ವಹಿಸಲು ಬೇಕಾದ ಅಗತ್ಯ ಸವಲತ್ತುಗಳನ್ನು ಒದಗಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಸೂಕ್ತ ಮೂಲಭೂತ ಸೌಕರ್ಯ ಒದಗಿಸಿ ಉತ್ತಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

