ದಕ್ಷಿಣ ಕನ್ನಡ

ನ್ಯಾಯಾಧೀಶರ ಸಹಿಫೋರ್ಜರಿ ಮಾಡಿದ ನ್ಯಾಯವಾದಿ

Published On :

ಮಂಗಳೂರು: ವಿಮೆ ಹಣ ನುಂಗಲು ನ್ಯಾಯವಾದಿಯೊಬ್ಬರು ಸೆಶನ್ಸ್ ನ್ಯಾಯಾಧೀಶರ ಸಹಿ ನಕಲು ಮಾಡಿ ಸುಳ್ಳು ಆದೇಶ ದಾಖಲೆ ತಯಾರಿಸಿದ್ದಾರೆ.
 ವಿಮಾ ಹಣ ಪಾವತಿ ಮಾಡಬೇಕಿದ್ದ ದೇನಾ ಬ್ಯಾಂಕ್ ಈ ಫೋರ್ಜರಿ ಮನಗಂಡು ಕೋರ್ಟ್ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ವಕೀಲನ   ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸೆಶನ್ಸ್ ನ್ಯಾಯಾಧೀಶರಾದ ಬಿ.ವಿ.ಪ್ರಕಾಶ್ ಮತ್ತು ಚೌಡಾಪುರ್‌ಕರ್ ಅವರ ಸಹಿ ಮತ್ತು ಸೀಲ್‌ಗಳನ್ನು ಫೋರ್ಜರಿ ಮಾಡಲಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ದೇನಾ ಬ್ಯಾಂಕ್‌ಗೆ ನೀಡಿ ವಿಮಾ ಹಣವನ್ನು ವಕೀಲ ತನ್ನ ಲಾಭಕ್ಕೆ ಬಳಸಲು ಯತ್ನಿಸಿದ್ದಾರೆ.
 ವಂಚನೆ ವಿರುದ್ಧ ಕೋರ್ಟ್ ಮುಖ್ಯ ಆಡಳಿತಾಧಿಕಾರಿ ಪ್ರಫುಲ್ಲ ನೀಡಿದ ದೂರಿನ ಆಧಾರದಲ್ಲಿ 2ನೇ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಆದೇಶ ಮೇರೆಗೆ ಬಂದರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ವಿಶ್ವಾಸ ದ್ರೋಹ ವಂಚನೆ ಅಡಿ ಸೆ.409, 419, 420, 465, 466, 467, 468, 471, 472  ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.
 ಅಪಘಾತದಲ್ಲಿ ವಿಮೆ ಹಣ ದೊರಕಿಸಿಕೊಡುವ ಕೇಸ್ ವಕೀಲರು ನಡೆಸುತ್ತಾರೆ. ಪ್ರತಿ ಕೇಸ್‌ನ ವಿಚಾರಣೆ ನಡೆಯುತ್ತಿರುವಾಗ ಹಣವನ್ನು ವಿಮೆ ಸಂಸ್ಥೆಯು ಬ್ಯಾಂಕ್‌ಗಳಲ್ಲಿ ಗಾಯಾಳು ಹೆಸರಲ್ಲಿ ಫಿಕ್ಸೆಡ್ ಠೇವಣಿ ಇಡುವುದು ನಿಯಮ. ತೀರ್ಪು ಬಂದ ತಕ್ಷಣ ಕೋರ್ಟ್‌ನ ದಾಖಲೆಗಳನ್ನು ಬ್ಯಾಂಕ್‌ಗೆ ಕಳುಹಿಸಿ ಹಣ ಬಿಡುಗಡೆ ಮಾಡುವುದು ಕ್ರಮ.
 ಆದರೆ ಕೋರ್ಟ್ ಆದೇಶ ತಯಾರಿಸಿ, ನ್ಯಾಯಾಧೀಶರ ಸಹಿ ನಕಲು ಮಾಡಿ ವಿಮಾ ಹಣ ಲಪಟಾಯಿಸಲು ದೇನಾ ಬ್ಯಾಂಕ್‌ಗೆ ನೀಡಿದ್ದರು. ವಿಮೆ ಹಣ ನೀಡುವಾಗ ಬ್ಯಾಂಕ್‌ಗಳು, ವಿಮಾ ಸಂಸ್ಥೆಗಳು ಹತ್ತಾರು ಬಾರಿ ಕ್ರಾಸ್ ಚೆಕ್ ಮಾಡುತ್ತವೆ.
ಈ ಪ್ರಕರಣದಲ್ಲಿ ನ್ಯಾಯಾಧೀಶರ ಸಹಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ದೇನಾ ಬ್ಯಾಂಕ್ ಮ್ಯಾನೇಜರ್ ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ವಂಚನೆ ಬೆಳಕಿಗೆ ಬಂದಿದೆ. ಆರೋಪ ಸಾಬೀತಾದರೆ 10 ವರ್ಷವರೆಗೂ ಶಿಕ್ಷೆಯಾಗುವ ಸಾಧ್ಯತೆ ಇದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.