ಡಾ. ತ್ರ್ಯಯಂಬಕ ನಾರಾಯಣ ತುಳುಪುಳೆಗೆ ಸನ್ಮಾನ
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕಳೆದ ಐದು ದಶಕಗಳಿಂತಲೂ ಹೆಚ್ಚು ಕಾಲ ವೈದ್ಯಕೀಯ ಸೇವೆ ನೀಡುತ್ತಿರುವ ತಾಲೂಕಿನ ಹಿರಿಯ ವೈದ್ಯ ಆಯುರ್ವೇದ ವಿಶಾರದ ಡಾ. ತ್ರ್ಯಯಂಬಕ ನಾರಾಯಣ ತುಳುಪುಳೆ ಅವರನ್ನು ಬೆಳ್ತಂಗಡಿ ರೋಟರಿ ಕ್ಲಬ್ನಿಂದ ಸನ್ಮಾನಿಸಲಾಯಿತು.
ಕಳೆದ 53 ವರ್ಷಗಳಿಂದ ಬೆಳ್ತಂಗಡಿಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಆನಡ್ಕದ ಡಾ. ತುಳುಪುಳೆ ಅವರು ಜ್ಯೋತಿಷ್ಯ ಶಾಸ್ತ್ರ ಹಾಗೂ ಇತರ ಲೇಖನಗಳನ್ನು ಪ್ರಕಟಿಸಿದ್ದಾರೆ. ವೇಣೂರಿನಲ್ಲಿ ನಡೆದ ಬೆಳ್ತಂಗಡಿ ತಾಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಇವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ, ಜಿಡ್ಡು ಆಯುರ್ವೇದ ಪ್ರತಿಷ್ಠಾನ ಹಾಗೂ ಇತರ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕಲಾಸಕ್ತರಾದ ಇವರು ಶಾಸ್ತ್ರೀಯ ನೆಲೆಯ ಯಕ್ಷಗಾನ ಭಾಗವತಿಕೆಯ ಅತಿಥಿ ಕಲಾವಿದರಾಗಿಯೂ ಜನ ಮನ್ನಣೆ ಗಳಿಸಿದವರು. ಬೆಳ್ತಂಗಡಿ ರೋಟರಿಯ ಪೂರ್ವಾಧ್ಯಕ್ಷ ಉಜಿರೆ ಬೆನಕ ಆಸ್ಪತೆಯ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ಅವರು ಡಾ. ತುಳುಪುಳೆ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಡಾ.ಎ. ಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಂ. ವೈಕುಂಠ ಪ್ರಭು, ಬೆಳ್ತಂಗಡಿ ರೋಟರಿಯ ಡಾ. ಶಶಿಧರ ಡೋಂಗ್ರೆ, ಡಾ. ಸುರ್ ಪ್ರಭು, ಪ್ರಕಾಶ್ ತುಳುಪುಳೆ, ಸುನೀಲ್ ಶೆಣೈ, ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್, ಅಳದಂಗಡಿಯ ವೈದ್ಯ ಡಾ.ಎನ್. ತುಳುಪುಳೆ, ಕ್ಲಬ್ ಅಧ್ಯಕ್ಷೆ ಪಲ್ಲವಿ ಮೊದಲಾದವರು ಇದ್ದರು.ಪುರಾಣ ವಾಚನ- ಪ್ರವಚನ
ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ
ಬೆಳ್ತಂಗಡಿ: ಎರಡು ತಿಂಗಳ ಕಾಲ ನಡೆಯಲಿರುವ ಪುರಾಣ ವಾಚನ- ಪ್ರವಚನ ಎಂಬ ಸತ್ಸಂಗ ಕಾರ್ಯಕ್ರಮಕ್ಕೆ ವಾಚನ- ಪ್ರವಚನಕಾರರು, ಕ್ಷೇತ್ರದ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಬುಧವಾರ ಧರ್ಮಸ್ಥಳದಲ್ಲಿ ಚಾಲನೆ ನೀಡಿದರು. ಮಂಗಳೂರಿನ ಉದ್ಯಮಿ ರಾಜವರ್ಮ ಬಳ್ಳಾಲ್, ವೀರು ಶೆಟ್ಟಿ, ಡಾ.ಈ. ಮಹಾಬಲ ಭಟ್, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ರವರೆಗೆ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಶ್ರೀ ಕುಮಾರ ವ್ಯಾಸ ವಿರಚಿತ ಕರ್ಣಾ ಭಾರತ ಮಂಜರಿಯ ವಾಚನ- ಪ್ರವಚನ ನಡೆಯಲಿದೆ. ಬುಧವಾರ ದಿವಾಕರ ಆಚಾರ್ಯ ವಾಚನ ಮಾಡಿದರೆ ಡಾ. ಈ. ಮಹಾಬಲ ಭಟ್ ಪ್ರವಚನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

