ಸಾಲ ಬಾಕಿ ವಸೂಲಿಗೆ ಕ್ರಮಕ್ಕೆ ಆಗ್ರಹ
ಮಂಗಳೂರು:ರಾಜ್ಯದಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ ವಿವಿಧ ಕಂಪನಿಗಳಿಂದ ರು. 2,04,249 ಕೋಟಿ ಸಾಲ ಮರುಪಾವತಿಗೆ ಬಾಕಿ ಇದ್ದು, ಇದರ ವಸೂಲಿಗೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಆಗ್ರಹಿಸಿದೆ. 2008-09ರಲ್ಲಿ ರು. 59,972 ಕೋಟಿ ಕಂಪನಿಗಳಿಂದ ಬರಲು ಬಾಕಿ ಇತ್ತು. ಈಗ ಅಸಲು, ಬಡ್ಡಿ ಸೇರಿ ನಾಲ್ಕು ಪಟ್ಟು ಆಗಿದೆ. ಒಟ್ಟು ವಹಿವಾಟಿನಲ್ಲಿ ಶೇ.50 ಸಾಲ ಭರ್ತಿಗೊಳಿಸುವ ಪ್ರಕ್ರಿಯೆಗೆ ವ್ಯಯವಾಗುತ್ತದೆ. 780 ವಹಿವಾಟು ಕಂಪನಿಗಳು ಸಾಲ ಮರುಪಾವತಿ ಮಾಡಿಲ್ಲ. ಇದರಿಂದ ಸಾಲ ನೀಡಿದ ಬ್ಯಾಂಕ್‌ಗಳಿಗೆ ಆರ್ಥಿಕ ಹೊರೆಯಾಗಿದ್ದು, ಸಾಲ ವಸೂಲಿಗೆ ಆರ್‌ಬಿಐ ಸಹಕಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ವಸೂಲಾದ ಮೊತ್ತವನ್ನು ಬಡಜನರ ಏಳ್ಗೆಗೆ ಬಳಸಬೇಕು ಎಂದು ಸಂಘಟನೆ ಜತೆ ಕಾರ್ಯದರ್ಶಿ ಬಿ.ಎಂ.ಮಾಧವ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಸದಸ್ಯರಾದ ರಾಜೇಶ್ ಆಚಾರ್, ಬಿ.ವಿ.ಗಿರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

