ಕಾಡಾನೆ ನಿರಂತರ ದಾಳಿ: ಅಪಾರ ಬೆಳೆ ಹಾನಿ
ಸುಬ್ರಹ್ಮಣ್ಯ: ಕೊಲ್ಲಮೊಗ್ರು ಮತ್ತು ಮಡಪ್ಪಾಡಿ ಗ್ರಾಮಗಳ ಗಡಿಭಾಗ ದೊಡ್ಡಕಜೆ ಕರಂಗಲ್ಲು ಪ್ರದೇಶದಲ್ಲಿ ಕಳೆದ ಎರಡು- ಮೂರು ದಿನಗಳಿಂದ ನಿರಂತರವಾಗಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಅಪಾರ ಬೆಳೆ ಹಾನಿ ಮಾಡಿವೆ. ಕೃಷಿಕ ಜಯರಾಮ ಕರಂಗಲ್ಲು ಎಂಬವರಿಗೆ ಸೇರಿದ ತೋಟದಲ್ಲಿ 10 ಕಂಗು, 4 ತೆಂಗಿನ ಗಿಡ, 125ಕ್ಕೂ ಹೆಚ್ಚು ಬಾಳೆಗಿಡ, ವಾಸುದೇವ ಗೌಡ ದೊಡ್ಡಕಜೆ ಎಂಬವರಿಗೆ ಸೇರಿದ 2 ಅಡಕೆ, 2 ತೆಂಗಿನ ಗಿಡ, ಕೆಂಚಪ್ಪ ಅವರ ತೋಟದಲ್ಲಿ 50ಕ್ಕೂ ಹೆಚ್ಚುಬಾಳೆ ಗಿಡಗಳನ್ನು ಕಾಡಾನೆಗಳು ನಾಶಪಡಿಸಿವೆ. ಅಲ್ಲದೆ, ಸ್ಥಳೀಯ ಲೋಕಯ್ಯ ಗೌಡ, ವೆಂಕಪ್ಪ ಗೌಡರ ತೋಟಗಳಿಗೂ ದಾಳಿ ನಡೆಸಿದ ಕಾಡಾನೆ ಹಿಂಡು ಬೆಳೆ ಹಾನಿ ಮಾಡಿ, ಕೃಷಿ ಸಲಕರಣೆಗಳನ್ನು ಕೂಡ ಹಾಳುಗೆಡಹಿವೆ. ಹಾನಿಗೊಳಗಾದ ಕೃಷಿಕರ ತೋಟಗಳನ್ನು ಅರಣ್ಯ ವೀಕ್ಷಕ ಸಿಬ್ಬಂದಿ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

