ದಕ್ಷಿಣ ಕನ್ನಡ

ಕಾಸ್ರಕ್ಕನ ಗಿಡ ನೆಟ್ಟು ಬೆಳೆ ರಕ್ಷಣೆ

Published On :

ಮೂಲ್ಕಿ:  ಆಟಿ ಅಮವಾಸ್ಯೆನ ಹಾಳೆ ಮರದ ತೊಗಟೆ ಕಷಾಯ ಕುಡಿದಲ್ಲಿ ಸರ್ವ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಅದೇ ರೀತಿ ರೈತರು ತಮ್ಮ ಬೆಳೆಯ ರಕ್ಷಣೆಗಾಗಿ ಈ ದಿನದಂದು ಗದ್ದೆಗಳಲ್ಲಿ ಕಾಸ್ರಕ್ಕನ(ಕಾಯೇರ್) ಗಿಡ ನೆಡುವ ಪದ್ಧತಿ ಅನಾದಿ ಕಾಲದಿಂದಲೂ ಇದ್ದು ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ತುಳುನಾಡಿನ ಅನೇಕ ರೈತರು ಶನಿವಾರ ತಮ್ಮ ಗದ್ದೆಗಳಲ್ಲಿ ಕಾಸ್ರಕ್ಕನ ಗಿಡಗಳನ್ನು ನೆಟ್ಟರು. ಈ ಮರ ಅತ್ಯಂತ ಕಹಿಯಾಗಿದ್ದು ಅದ್ದರಿಂದ ಬೆಳೆಗೆ ಯಾವುದೇ ರೋಗ ಬರುವುದಿಲ್ಲ. ಜೊತೆಗೆ ಅದಕ್ಕೆ ಮಣ್ಣಿನಲ್ಲಿರುವ ನಂಜನ್ನು ಹೀರುವ ಶಕ್ತಿಯಿದೆ ಎನ್ನಲಾಗಿದೆ. ಈ ಪ್ರಕ್ರಿಯೆಯನ್ನು ತುಳುನಾಡಲ್ಲಿ ಕಾಪು ಎಂದು ಹೇಳುತ್ತಾರೆ. ಇದರಿಂದ ಬೆಳೆಗಳ ರಕ್ಷಣೆ ಸಾಧ್ಯ ಎಂಬುದು ರೈತರ ನಂಬಿಕೆ.


ಹೆದ್ದಾರಿ ಯೋಜನೆಗೆ ಇಪಿಸಿ ಮಾದರಿ: ಕೇಂದ್ರ ನಿರ್ಧಾರ



ಮಂಗಳೂರು: ದೇಶದಲ್ಲಿ ರು. 50 ಕೋಟಿಗಿಂತ ಅಧಿಕ ಮೊತ್ತದ ಎಲ್ಲ ರಾ.ಹೆ. ಯೋಜನೆಗಳನ್ನು ಎಂಜಿನಿಯರಿಂಗ್, ಖರೀದಿ ಮತ್ತು ಕಾಮಗಾರಿ(ಇಪಿಸಿ) ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲೋಕಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಕೃಷ್ಣಪಾಲ್ ಗುರ್ಜರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ವಿಳಂಬವಾಗಿರುವ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಬೇಕಾಗುವ ದೊಡ್ಡ ಮೊತ್ತವನ್ನು ಸಾಧನೇತರ ಘಟಕದಲ್ಲಿ ಸೇರ್ಪಡೆಗೊಳಿಸಲಾಗುವುದು. ಇಪಿಸಿ ಮಾದರಿಯಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪರಿಹಾರ ಪ್ರಕರಣ ಇತ್ಯರ್ಥಪಡಿಸಲು ಉನ್ನತ ಮಟ್ಟದ ಎಕ್ಸ್‌ಪರ್ಟ್ ಸೆಟ್ಲ್‌ಮೆಂಟ್ ಸಲಹಾ ಸಮಿತಿಗೆ ಮಂಡಿಸಲಾಗುವುದು. ಅನುದಾನ ಬಿಡುಗಡೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು. ರಾ.ಹೆ.ಜಾಲವನ್ನು ಲೇಹ್, ಲಡಾಕ್, ಈಶಾನ್ಯ ರಾಜ್ಯಗಳು, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಡಗಳಲ್ಲಿ ವಿಸ್ತರಿಸಲಾಗುತ್ತಿದೆ. ಈ ಸಾಲಿನ ವಾರ್ಷಿಕ ಯೋಜನೆಯಲ್ಲಿ ಇಲ್ಲಿ ಹೆದ್ದಾರಿ ಅಭಿವೃದ್ಧಿಯನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.