ದಕ್ಷಿಣ ಕನ್ನಡ

ಕೊಂಕಣಿ ಶಾಸ್ತ್ರೀಯ ಸಾಹಿತ್ಯ ಡಿಜಿಟಲೀಕರಣ ನಿರ್ಧಾರ

Published On :

ಮಂಗಳೂರು: ಕೊಂಕಣಿ ಶಾಸ್ತ್ರೀಯ ಸಾಹಿತ್ಯ ಕೃತಿಗಳನ್ನು ಸಂಗ್ರಹಿಸಿ ಡಿಜಿಟಲೀಕರಣ ಮತ್ತು ಧ್ವನಿಮುದ್ರಿಸಿ ಅಂತರ್ಜಾಲದಲ್ಲಿ ಪಸರಿಸಲು ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಪ್ರತಿಷ್ಠಾನ ಏರ್ಪಡಿಸಿದ ದುಂಡು ಮೇಜಿನ ಸಭೆ ನಿರ್ಧರಿಸಿದೆ.
ಪ್ರತಿಷ್ಠಾನ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಗೋವಾ, ಕೇರಳ, ಮುಂಬೈ, ಕರ್ನಾಟಕ ರಾಜ್ಯದಿಂದ ಸುಮಾರು 20ಕ್ಕೂ ಅಧಿಕ ಹಿರಿಯ ಸಾಹಿತಿಗಳು, ಸಂಶೋಧಕರು ಪಾಲ್ಗೊಂಡಿದ್ದರು.
ಮೌಖಿಕ, ಶಾಸ್ತ್ರೀಯ, ಆಧುನಿಕ ಹಾಗೂ ಭಾಷಾಂತರ ಹೀಗೆ ನಾಲ್ಕು ವಿಧದಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಡೆಸಲಾಗುವುದು. ಕೊಂಕಣಿ ಲಿಖಿತ ಸಾಹಿತ್ಯ 16ನೇ ಶತಮಾನದಲ್ಲಿ ಕಂಡುಬಂದಿದೆ.
 ಹೆಚ್ಚಿನ ಸಾಹಿತ್ಯ ವಿಚಾರಗಳು ಗೋವಾದಲ್ಲಿ ಮೌಖಿಕವಾಗಿ ಇದ್ದಿತ್ತು. ರಾಮಾಯಣ, ಮಹಾಭಾರತ ಕಾವ್ಯಗಳನ್ನು ಕೊಂಕಣಿ ಭಾಷೆಯಲ್ಲಿ ಮೌಖಿಕವಾಗಿ ಹೇಳುತ್ತಿದ್ದರು. ಕೊಂಕಣಿ ಭಾಷೆಯಲ್ಲಿ ಇದನ್ನು ಕೇಳಿದ ಪಾದ್ರಿಗಳು ಇವನ್ನು ರೋಮನ್ ಲಿಪಿಯಲ್ಲಿ ಬರೆದಿದ್ದರು. ಮೂಲ ಸಾಹಿತ್ಯ ಲಿಖಿತ ರೂಪದಲ್ಲಿ ಕೊಂಕಣಿಯಲ್ಲಿ ಬಂದದ್ದು ಕಡಿಮೆ. ಕೊಂಕಣಿಗೆ ಸಂಬಂಧಿಸಿದ ಸಾಹಿತ್ಯ ದೇವನಾಗರಿ, ಕನ್ನಡ, ಮಲಯಾಳಂ ಹಾಗೂ ರೋಮನ್ ಲಿಪಿಯಲ್ಲಿದೆ. ಇದನ್ನೆಲ್ಲ ಸೇರಿಸಿ ಪಿಡಿಎಫ್ ಮಾದರಿಯಲ್ಲಿ ಡಿಜಿಟಲೀಕರಿಸಿ ವಿವರನ್ನು ಧ್ವನಿ ಮುದ್ರಿಸಲಾಗುವುದು. ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸುವಂತೆ ಕೇಂದ್ರ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ
ಈ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ವಿಶ್ವ ಕೊಂಕಣಿ ಕೇಂದ್ರದ ಮಹಾದಾನಿ ಟಿ.ವಿ.ಮೋಹನದಾಸ ಪೈ ಅವರು ಶಾಸ್ತ್ರೀಯ ಕೊಂಕಣಿ ಸಾಹಿತ್ಯ ಸಂಗ್ರಹಕ್ಕೆ ನೀಡಿದ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.