ದಕ್ಷಿಣ ಕನ್ನಡ

ಕಾಲುಬಾಯಿ ಜ್ವರ ಲಸಿಕೆ ನೀಡಿಕೆ ಆಗಸ್ಟ್ನಿಂದ

Published On :

ಮಂಗಳೂರು: ಈ ಬಾರಿ ಕಾಲುಬಾಯಿ ಜ್ವರಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪಶು ವೈದ್ಯ ಇಲಾಖೆ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧ ಚುಚ್ಚುಮದ್ದು ಲಸಿಕೆ ಆಗಸ್ಟ್ನಲ್ಲಿ ವ್ಯಾಪಕವಾಗಿ ಹಾಕಲಿದೆ. ಈ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದರು.  ಜಿಲ್ಲೆಯ 8 ಗ್ರಾಮಗಳಲ್ಲಿ ಕಳೆದ ವರ್ಷ ಕಾಯಿಬಾಯಿ ಜ್ವರ ಕಾಣಿಸಿಕೊಂಡು 6 ಜಾನುವಾರು ಬಲಿಪಡೆದಿತ್ತು. ಇದು ವೈರಾಣುವಿನಿಂದ ಹಬ್ಬುವ ಜ್ವರವಾಗಿದ್ದು, ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಶೀಘ್ರವಾಗಿ ಹರಡುವ ಕಾಯಿಲೆ. ಈ ರೋಗದಿಂದ ಜಾನುವಾರುಗಳಲ್ಲಿ ನಿಶ್ಶಕ್ತಿ ಹೆಚ್ಚಿ ಹಾಲು ಕೊಡುವ ಹಸು, ಎಮ್ಮೆಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ. ಈ ರೋಗಕ್ಕೆ ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕೆಯಾಗಿ ವರ್ಷಕ್ಕೆ 2 ಬಾರಿ ರೋಗ ನಿರೋಧಕ ಚುಚ್ಚುಮದ್ದು ಕೊಡಿಸಬೇಕು ಎಂದು ಪಶು ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ತಿಳಿಸಿದರು.  ಈ ಬಾರಿ ಜಿಲ್ಲೆಯಲ್ಲಿ 2,64,769 ಜಾನುವಾರಿಗೆ ಲಸಿಕೆ ಹಾಕುವ ಗುರಿ ಇದೆ. ಕಳೆದ ವರ್ಷ 2.58 ಲಕ್ಷ ಜಾನುವಾರಿಗೆ ಲಸಿಕೆ ಹಾಕುವ ಮೂಲಕ ಶೇ.97 ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೂತನ ಆವಿಷ್ಕಾರ ಮೈಕ್ರೋ ಫೋಲ್ಡಿಂಗ್ ಮೆಶಿನ್
ಸುಬ್ರಹ್ಮಣ್ಯ: ನಿಂತಿಕಲ್ಲು ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ 2012-14ನೆ ಮೆಕ್ಯಾನಿಕಲ್ ಫಿಟ್ಟರ್ ವಿಭಾಗದ ತರಬೇತುದಾರರಿಂದ ನೂತನವಾಗಿ ಆವಿಷ್ಕಾರವಾದ ಮೈಕ್ರೋ ಫೋಲ್ಡಿಂಗ್ ಮೆಶಿನ್(ಎಂಎಫ್ಎಂ) ಹಸ್ತಾಂತರ ಇತ್ತೀಚೆಗೆ ಸಂಸ್ಥೆಯ ಫಿಟ್ಟರ್ ವಿಭಾಗದ ಕಾರ್ಯಾಗಾರದಲ್ಲಿ ನಡೆಯಿತು. ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಕೆ.ಎಸ್ ಕಾರ್ಯಕ್ರಮ ಉದ್ಘಾಟಿಸಿದರು.  ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಗೋವಿಂದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ಶರತ್ ಕುಮಾರ್ ಎಸ್.ಎಚ್ ಸ್ವಾಗತಿಸಿದರು. ಪ್ರಸನ್ನ ವೈ.ಟಿ ಶುಭ ಕೋರಿದರು.  ರಾಜು ಅಶೋಕ್ ವಂದಿಸಿದರು. ಅನಿಲ್ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ಶರತ್ ಕುಮಾರ್ ಎಸ್.ಎಚ್ ತರಬೇತುದಾರರ ನೂತನ ಆವಿಷ್ಕಾರ ಮೈಕ್ರೋ ಫೋಲ್ಡಿಂಗ್ ಮೆಶಿನ್ ಬಗ್ಗೆ ಮಾತನಾಡಿ, ಈ ಯಂತ್ರ ತರಬೇತುದಾರರ ಕೌಶಲ್ಯತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅತ್ಯಂತ ತೆಳ್ಳಗೆ ಇರುವ ಮೈಕ್ರೊ ಮಿಲಿಮೀಟರ್ ಹೊಂದಿರುವ ಕಬ್ಬಿಣದ ಹಾಳೆಯನ್ನು ಕೂಡಾ ಯಾವುದೇ ಆಕಾರಕ್ಕೂ ಮಡಚಬಲ್ಲುದು. ತ್ರೀಡಿ ಆಕಾರಕ್ಕೆ ಅತ್ಯಂತ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಕಬ್ಬಿಣದ ಹಾಳೆಯನ್ನು ಪರಿವರ್ತಿಸಬಹುದು ಮತ್ತು ಯಾವುದೇ ಕೋನಕ್ಕೂ ಮಡಚಬಹುದು.  ಅತ್ಯಂತ ಸೂಕ್ಷ್ಮ ಬಿಡಿಬಾಗಗಳನ್ನು ನಿರ್ಮಿಸುವ ಕೈಗಾರಿಕೆಗಳಲ್ಲಿ ಈ ಯಂತ್ರ ಪ್ರಮುಖ ಪಾತ್ರ ವಹಿಸುವುದು. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ಯಂತ್ರ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯೊಂದರ ಪ್ರಶಂಸೆಗೆ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಪ್ರೋತ್ಸಾಹ ನೀಡಲು ಮುಂದಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.