ದಕ್ಷಿಣ ಕನ್ನಡ

ನೀರು ಪೂರೈಕೆ ವ್ಯತ್ಯಯ ಇಂದು

Published On :

ಮಂಗಳೂರು: ಮಹಾನಗರ ಪಾಲಿಕೆಯ ನೀರು ಪೂರೈಕೆ ವ್ಯವಸ್ಥೆಯ 80 ಎಂಎಲ್‌ಡಿ ಮುಖ್ಯ ಕೊಳವೆಯ ಏರ್ ವಾಲ್ವ್ ಸೋರುತ್ತಿದ್ದು, ನೀರು ಪೋಲಾಗುತ್ತಿದೆ. ಇದರ ದುರಸ್ತಿ ಕಾರ್ಯ ಜೂ.25ರಂದು ವಳಚ್ಚಿಲ್ ಶ್ರೀನಿವಾಸ ಕಾಲೇಜು ಅಡ್ಡರಸ್ತೆ ಬಳಿಯಿಂದ ಕಣ್ಣೂರು ಹಳೆ ಚೆಕ್‌ಪೋಸ್ಟ್ ವರೆಗೆ ನಡೆಯುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  ಈ ಏರ್ ವಾಲ್ವ್ ದುರಸ್ತಿಗೆ 1100 ವ್ಯಾಸದ ಪಡೀಲ್ ಸ್ಥಾವರಕ್ಕೆ ನೀರು ಪೂರೈಸುವ ಮುಖ್ಯ ಕೊಳವೆಯ ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಈ ಸಂದರ್ಭ ಕಣ್ಣೂರು, ಬಜಾಲ್, ಮೋರ್ಗನ್‌ಗೇಟ್, ಮಂಗಳಾದೇವಿ, ಓಲ್ಡ್‌ಕೆಂಟ್ ರಸ್ತೆ, ಅತ್ತಾವರ, ಕಾವೂರು, ಮರಕಡ, ಶಕ್ತಿನಗರ, ಕರಾವಳಿ ಪಂಪ್‌ಹೌಸ್ ಪ್ರದೇಶದಲ್ಲಿ ನೀರು ವಿತರಣೆ ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
ಮಹಿಳೆ ಕೊಲೆ ಶೀಘ್ರ ತನಿಖೆಗೆ
ಮಹಿಳಾ ಮೋರ್ಚಾ ಒತ್ತಾಯ
ಪುತ್ತೂರು: ಉಪ್ಪಿನಂಗಡಿಯಲ್ಲಿ ಮಹಿಳೆಯ ಕೊಲೆ ನಿಗೂಢತೆ ಭೇದಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಈ ಬಗ್ಗೆ ಪೊಲೀಸ್ ಉನ್ನತ ಅಧಿಕಾರಿಗಳು ಕೂಲಂಕಷ ತನಿಖೆ ನಡೆಸುವಂತೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯಿಸಿದೆ. ಮಹಿಳಾ ಮೋರ್ಚಾ ನಿಯೋಗ ಮೂಲಕ ಪೊಲೀಸ್ ಉಪ ಅಧೀಕ್ಷಕರಿಗೆ ಮನವಿ ನೀಡಿ ಉನ್ನತ ತನಿಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. 10 ದಿನಗಳ ಹಿಂದೆ ಉಪ್ಪಿನಂಗಡಿ ಪೇಟೆ ಸಮೀಪವಿರುವ ಮನೆಯಲ್ಲಿ ಶಿಕ್ಷಕ ಗುರುಮೂರ್ತಿ ಪತ್ನಿ ಪುಷ್ಪಲತಾ ಕೊಲೆಯಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಕೊಲೆ ನಡೆದಿತ್ತು. ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಕೇಸು ದಾಖಲಿಸಿ ತನಿಖೆಗೆ ಮುಂದಾಗಿದ್ದರು.  ಆದರೆ ಈವರೆಗೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ತಕ್ಷಣ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ಮೋರ್ಚಾ ಅಧ್ಯಕ್ಷೆ ತ್ರಿವೇಣಿ ಪೆರ್ವೋಡಿ ಒತ್ತಾಯಿಸಿದ್ದಾರೆ.  ನಿಯೋಗದಲ್ಲಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೌರಿ, ಮುಖಂಡರಾದ ಜಯಂತಿ ನಾಯಕ್, ಪ್ರೇಮಲತಾ ರಾವ್, ಉಷಾಚಂದ್ರ ಮುಳಿಯ, ಜ್ಯೋತಿ ನಾಯಕ್, ವನಿತಾ, ಯಶೋದಾ, ಜಯಶೀಲ ಇದ್ದರು.
ದೇಂದಡ್ಕ ದೇವಸ್ಥಾನದಲ್ಲಿ
ದೃಢ ಸಂಪ್ರೋಕ್ಷಣೆ
ಮೂಲ್ಕಿ: ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಜರಗಿದ ಮೂಲ್ಕಿ ಸಮೀಪದ ಕವತ್ತಾರಿನ ದೇಂಡದ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ವೇದಮೂರ್ತಿ ದೇಂದಡ್ಕ ರಾಮಕೃಷ್ಣ ಭಟ್‌ರಿಂದ ದೃಢ ಸಂಪ್ರೋಕ್ಷಣೆ ಜರಗಿತು. ಆನುವಂಶಿಕ ಮೊಕ್ತೇಸರ ವನಜಾಕ್ಷಿ ಹೆಗ್ಡೆ, ರತ್ನಾವತಿ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗದೀಶ್ ಪ್ರಭು, ಮುಂಬೈ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.