ಮದರಸ ಮಾತ್ರ ಯಾಕೆ? ಮಠ, ಮಂದಿರಕ್ಕೂ ಮಾಸಾಶನ ನೀಡಿ
ಮಂಗಳೂರು: ಮದರಸಗಳಿಗೆ ಮಾಸಾಶನ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಮಠ, ಮಂದಿರಕ್ಕೂ ನಿಗದಿಪಡಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕ ಒತ್ತಾಯಿಸಿದೆ.
ಅಲ್ಪಸಂಖ್ಯಾತರ ಓಲೈಕೆಗೆ ಮದರಸಗಳಿಗೆ # 3,500 ಮಾಸಾಶನ ನೀಡಲು ಸಿದ್ಧತೆ ನಡೆಸಿದೆ. ಇದನ್ನು ಹಿಂದೂಗಳ ಮಠಕ್ಕೂ ವಿಸ್ತರಿಸುವಂತೆ ರಾಜ್ಯ ಘಟಕ ಅಧ್ಯಕ್ಷ ನಾ.ಸುಬ್ರಹ್ಮಣ್ಯ ರಾಜು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮೂಲಸೌಕರ್ಯ ಒದಗಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿ ಮಾಡುತ್ತಿಲ್ಲ. ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಕ್ಷಮೆ ಕೇಳದಿದ್ರೆ ಪ್ರತಿಭಟನೆ: ನರೇಂದ್ರ ಮೋದಿ ವ್ಯಕ್ತಿತ್ವದಿಂದ ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಲಭಿಸಿದ್ದು ಗೊತ್ತಿರುವ ಸಂಗತಿಯಾದರೂ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪಕ್ಷದ ವರ್ಚಸ್ಸಿನಿಂದ ಅಧಿಕಾರಕ್ಕೆ ಬಂದಿದೆ ಎನ್ನುತ್ತಿದ್ದಾರೆ. ಇವರ ಹೇಳಿಕೆ ಖಂಡನೀಯವಾಗಿದ್ದು, ಅವರು ಹೇಳಿಕೆ ಹಿಂಪಡೆಯದಿದ್ದರೆ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉರ್ವ ಮೀನುಮಾರುಕಟ್ಟೆ ದುಸ್ಥಿತಿಯಲ್ಲಿದ್ದು, ಶಾಸಕರಿಗೆ, ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮುಂದೆ ಶಾಸಕರಿಗೆ ದಿಗ್ಬಂಧನ ಹಾಕುವುದಲ್ಲದೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ರೈಲು ಪ್ರಯಾಣ ದರ ಏರಿಕೆಗೆ ಸಮರ್ಥನೆ!
ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವುದನ್ನು ಹಿಂದೂ ಮಹಾಸಭಾ ಬೆಂಬಲಿಸಿದೆ. ರೇಲ್ವೆ ಸುರಕ್ಷತೆ ಮತ್ತು ಸಮರ್ಪಕ ಸೇವೆ ಕಲ್ಲಿಸುವ ಹಾಗೂ ಸಾಲದ ಹೊರೆಯನ್ನು ಮುಕ್ತಗೊಳಿಸಲು ರೈಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ಇದೇ ರೀತಿ ರೇಲ್ವೆ ಇಲಾಖೆಯಲ್ಲಿ ಸೋರುತ್ತಿರುವ ವೆಚ್ಚವನ್ನು ಕೂಡಲೇ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಹಾಗೆಂದು ಪ್ರತ್ಯೊಂದಕ್ಕೂ ಬೆಲೆ ಏರಿಕೆ ಮಾಡಿದರೆ ಖಂಡಿಸುವುದಾಗಿ ಹೇಳಿದರು. ರಾಷ್ಟ್ರೀಯ ಅಧ್ಯಕ್ಷ ಡಾ.ಸಂತೋಷ್ ರಾಯ್, ರಾಜೇಶ್ ಪೂಜಾರಿ, ಶ್ರವಣ ಕುಮಾರ್, ರಾಜೇಶ್ ಪವಿತ್ರನ್, ರವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

