ದಕ್ಷಿಣ ಕನ್ನಡ

ಮಾನ್ಸೂನ್ ರೇಲ್ವೆ ವೇಳಾಪಟ್ಟಿ ಜು.1ರಿಂದ

Published On :

ಮಂಗಳೂರು: ಕೊಂಕಣ ರೇಲ್ವೆ ಮಾರ್ಗದಲ್ಲಿ ಮಳೆಗಾಲದಲ್ಲಿ ಸಂಚರಿಸುವ ರೈಲುಗಳ ಮಾನ್ಸೂನ್ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದು ಜುಲೈ ಒಂದರಿಂದ ಜಾರಿಗೆ ಬರಲಿದೆ.
ಭಟ್ಕಳ-ಮಂಗಳೂರು ಡೆಮು ರೈಲು ಜುಲೈ 1ರಿಂದ ಗೋವಾ ವರೆಗೆ ವಿಸ್ತರಿಸಲಿದೆ. ಮಡ್ಗಾಂವ್‌ನಿಂದ ಬೆಳಗ್ಗೆ 5ಕ್ಕೆ ಹೊರಟು ಮಧ್ಯಾಹ್ನ 12.05ಕ್ಕೆ ಮಂಗಳೂರು ಸೆಂಟ್ರಲ್‌ಗೆ, ಸೆಂಟ್ರಲ್‌ನಿಂದ ಮಧ್ಯಾಹ್ನ 2.55ಕ್ಕೆ ಹೊರಟು ರಾತ್ರಿ 10.30ಕ್ಕೆ ಮಡ್ಗಾಂವ್ ತಲಪಲಿದೆ.
ಕಾರವಾರ/ಕಣ್ಣೂರು-ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 15ರಿಂದ ಯಶವಂತಪುರ ಬದಲು ಬೆಂಗಳೂರು ಸಿಟಿಯಲ್ಲಿ ನಿಲುಗಡೆಯಾಗಲಿದೆ.
ಈ ಕೆಳಗಿನ ರೈಲುಗಳು ತಮ್ಮ ಆರಂಭದ ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಡಲಿದ್ದು, ಹೊಸ ವೇಳಾಪಟ್ಟಿ ಈ ರೀತಿ ಇದೆ: ಮತ್ಸ್ಯಗಂಧ-ಸಿಎಸ್‌ಟಿಎಂ ಮಾಂಡೋವಿ ಎಕ್ಸ್‌ಪ್ರೆಸ್ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಸಾವಂತವಾಡಿ-ದಾದರ್ ರಾಜ್ಯರಾಣಿ ಎಕ್ಸ್‌ಪ್ರೆಸ್ ಸಂಜೆ 5.30, ಎರ್ನಾಕುಲಂ-ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್ ಬೆಳಗ್ಗೆ 10.45, ಮತ್ಸ್ಯಗಂಧ-ದಾದರ್ ಜನಶತಾಬ್ದಿ ಎಕ್ಸ್‌ಪ್ರೆಸ್ ಮಧ್ಯಾಹ್ನ 12.10, ಮಂಗಳೂರು ಸೆಂಟ್ರಲ್ ಕುರ್ಲಾಮತ್ಸ್ಯಗಂಧ ಎಕ್ಸ್‌ಪ್ರೆಸ್ ಮಧ್ಯಾಹ್ನ 12.50, ಮತ್ಸ್ಯಗಂಧ-ಸಿಎಸ್‌ಟಿಎಂ ಕೊಂಕಣ್‌ಕನ್ಯಾ ಎಕ್ಸ್‌ಪ್ರೆಸ್ ಸಂಜೆ 4.45, ಮತ್ಸ್ಯಗಂಧ-ಚಂಡೀಗಢ ಗೋವಾ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಮಧ್ಯಾಹ್ನ 12.25, ಮಂಗಳೂರು ಜಂಕ್ಷನ್-ಸಿಎಸ್‌ಟಿಎಂ ಎಕ್ಸ್‌ಪ್ರೆಸ್ ಸಂಜೆ 4.45, ಮತ್ಸ್ಯಗಂಧ-ಹಾಪಾ ಎಕ್ಸ್‌ಪ್ರೆಸ್ ಬೆಳಗ್ಗೆ 7.15, ವಾಸ್ಕೋಡಗಾಮ-ಪಾಟ್ನಾ ಎಕ್ಸ್‌ಪ್ರೆಸ್ ಸಂಜೆ 6, ಸಾವಂತವಾಡಿ-ದಿವಾ ಪ್ಯಾಸೆಂಜರ್ ಬೆಳಗ್ಗೆ 8.35, ಮತ್ಸ್ಯಗಂಧ-ಮಾಸ್ಕೋ ಪ್ಯಾಸೆಂಜರ್ ಮಧ್ಯಾಹ್ನ 2, ಮತ್ಸ್ಯಗಂಧ-ಎರ್ನಾಕುಲಂ ಎಕ್ಸ್‌ಪ್ರೆಸ್ ರಾತ್ರಿ 9, ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ಮಧ್ಯಾಹ್ನ 2.55ಕ್ಕೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.



ಪಿಆರ್‌ಒ ಸುಧಾಕೃಷ್ಣಮೂರ್ತಿ
ಕೊಂಕಣ ರೇಲ್ವೆ ಮಂಗಳೂರು ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸುಧಾ ಕೃಷ್ಣಮೂರ್ತಿ ನೇಮಕಗೊಂಡಿದ್ದಾರೆ. ಮಂಗಳೂರು ಪ್ರತ್ಯೇಕ ರೇಲ್ವೆ ವಿಭಾಗ ರಚನೆಗೆ ಪೂರಕವಾಗಿ ಈ ನೇಮಕ ನಡೆದಿದೆ ಎಂದು ಕೊಂಕಣ ರೇಲ್ವೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.