ಸಮಯ ಪಾಲನೆ ವಿವಾದ; ಬಸ್ ಚಾಲಕಗೆ ಹಲ್ಲೆ
ಮೂಲ್ಕಿ: ಕಿನ್ನಿಗೋಳಿ ವಲಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಐಕಳ ಲಕ್ಷ್ಮೀ ಜನಾರ್ದನ ಟ್ರಾವೆಲ್ಸ್ ಬಸ್ನ ಮಾಲೀಕ ದುರ್ಗಾಪ್ರಸಾದ್ ಶೆಟ್ಟಿ ಆದಿ ಜನಾರ್ದನ ಬಸ್ನ ಚಾಲಕ ಉಲ್ಲಂಜೆಯ ಹುಸೇನ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಿನ್ನಿಗೋಳಿಯಲ್ಲಿ ಬುಧವಾರ ನಡೆದಿದೆ. ಬಸ್ನ ಸಮಯ ಪಾಲನೆ ವಿಷಯದಲ್ಲಿ ಶಿಮಂತೂರಿನ ಶ್ರೀ ಆದಿ ಜನಾರ್ದನ ಟ್ರಾವೆಲ್ಸ್ ಬಸ್ ಮತ್ತು ಐಕಳದ ಲಕ್ಷ್ಮೀ ಜನಾರ್ದನ ಟ್ರಾವೆಲ್ಸ್ ಬಸ್ಗಳ ನಡುವೆ ಕೆಲವು ಸಮಯಗಳಿಂದ ಮನಸ್ತಾಪ ಹಾಗೂ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ಬಸ್ಸಿನ ಚಾಲಕ ಆಕ್ರೋಶಗೊಂಡು ಬಸ್ ಸಂಚಾರ ಸ್ಥಗಿತಗೊಳಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.
ಮೂಲ್ಕಿ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿ ಬಸ್ ಮಾಲೀಕರ- ಚಾಲಕರ ಸಭೆ ಕರೆದಿದ್ದು ಹಲ್ಲೆ ನಡೆಸಿದ ಬಸ್ ಮಾಲೀಕ ಕ್ಷಮೆಯಾಚಿಸಬೇಕೆಂದು ಚಾಲಕರು ಒತ್ತಾಯಿಸಿದರು. ಕಿನ್ನಿಗೋಳಿ ಪರಿಸರದಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚಿದ್ದು ಹಾಗೂ ಕಟೀಲು, ಐಕಳ ಕಾಲೇಜುಗಳಿದ್ದು ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು ಬಸ್ಸು ಸಂಚಾರ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

