ದಕ್ಷಿಣ ಕನ್ನಡ

ಮಾಜಿ ಶಾಸಕ ಕುಶಲ ಕಣಕ್ಕೆ

Published On :

ಸುಳ್ಯ: ದಲಿತರಿಗೆ ನ್ಯಾಯ ಮತ್ತು ಅವರ ಹಕ್ಕುಗಳನ್ನು ದೊರಕಿಸಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಸುಳ್ಯ ಮಾಜಿ ಶಾಸಕ ಕೆ.ಕುಶಲ ಹೇಳಿದ್ದಾರೆ.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 9.40 ಲಕ್ಷ ಪರಿಶಿಷ್ಟ ಜಾತಿ, ಪಂಗಡದ ದಲಿತ ಮತದಾರರಿದ್ದಾರೆ. ಅನೇಕ ವರ್ಷಗಳಿಂದ ಕರಾವಳಿಯ ಉದ್ದಗಲದಲ್ಲಿರುವ ದಲಿತರಿಗೆ, ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಕೊಡಮಾಡಿದ ಹಕ್ಕುಗಳು ದೊರೆಯದೆ ಅನ್ಯಾಯವಾಗಿದೆ. ಯಾವುದೇ ಪಕ್ಷದಿಂದ ಆರಿಸಿ ಹೋದವರೂ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ವಿವಿಧ ಇಲಾಖೆಯಲ್ಲಿನ ಪರಿಶಿಷ್ಟರಿಗೆ, ಹಕ್ಕಿನಂತೆ ಸಿಗಬೇಕಾದ ನೀಡಬೇಕಾದ ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡಲು ಮೀನ ಮೇಷ ಎಣಿಸುತ್ತಿದೆ ಎಂದರು.
ದಲಿತರಿಗೆ ಅನ್ಯಾಯ: 2011-12ನೇ ಸಾಲಿಗೆ ಅಂಬೇಡ್ಕರ್ ಯೋಜನೆಯಂತೆ, ದಲಿತರಿಗೆ ಮಂಜೂರಾದ ಕೊಳವೆ ಬಾವಿಯನ್ನು 2014-15ನೇ ಸಾಲಿಗೂ ಕೊರೆಯದೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 1,60,000 ಎಕ್ರೆ ಜಮೀನು ಡಿ.ಸಿ. ಮನ್ನಾ ಭೂಮಿ ವಂಚಿತಗೊಂಡಿದೆ. ರಾಜ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪಂಗಡದ ನಿಜವಾದ ದಲಿತರಿಗೆ ವಿವಿಧ ಇಲಾಖೆಯಲ್ಲಿ ಸಿಗಬೇಕಾದ ಹುದ್ದೆಯನ್ನು ಪರಿಶಿಷ್ಟರ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿ, ಬೇರೆ ಮೇಲು ವರ್ಗದ ಜನರು ಉದ್ಯೋಗ ಪಡೆದಿದ್ದಾರೆ. ಇಂತಹ  ಸುಮಾರು 40 ಸಾವಿರ ಪ್ರಕರಣಗಳು ಇವೆ ಎಂದು ಹೇಳಿದರು. ದಸಂಸ ಮುಖಂಡರಾದ ವಿಶ್ವನಾಥ ಅಲೆಕ್ಕಾಡಿ, ಆನಂದ ಎನ್. ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.