ಚುನಾವಣಾ ಅಧಿಕಾರಿಗಳು ಗುಜರಾತ್‌ಗೆ ತೆರಳಿ
ಮೋದಿ ಪತ್ನಿ ಬಗ್ಗೆ ಮಾಹಿತಿ ಪಡೆಯಲಿ: ಪೂಜಾರಿ
ಪುತ್ತೂರು: 'ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡುವ ತಾನು ಮೋದಿ ಪತ್ನಿ ವಿಚಾರದಲ್ಲಿ ಯಾವುದೇ ಸುಳ್ಳು ಆಪಾದನೆ ಮಾಡಿಲ್ಲ. ಮೋದಿ ಪತ್ನಿ ಬಗ್ಗೆ ಹೇಳಿಕೆ ನೀಡಿರುತ್ತೇನೆ ಎಂದು ತನ್ನ ವಿರುದ್ಧ ದೂರು ದಾಖಲಿಸಿಕೊಂಡಿರುವ ಚುನಾವಣಾ ಅಧಿಕಾರಿಗಳು ಮೊದಲು ಗುಜರಾತ್‌ಗೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಕ್ರಮ ಕೈಗೊಳ್ಳಲಿ' ಎಂದು ಲೋಕಸಭಾ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾದಲ್ಲಿ ಸ್ವರ್ಗವನ್ನೇ ನೀಡುತ್ತಾರೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಿಂಬಿಸುತ್ತಿವೆ.
ಪತ್ನಿಯನ್ನು ದೂರಮಾಡಿ ಕಣ್ಣೀರು ಸುರಿಸುವಂತೆ ಮಾಡಿರುವ ಮೋದಿ ಬಗ್ಗೆ ಗುಜರಾತ್‌ಗೆ ತೆರಳಿ ಆ ತಾಯಿಯನ್ನು ಪ್ರಶ್ನಿಸಿ ಅವರ ಸಮಸ್ಯೆಯ ಅರಿತು ಬಳಿಕ ಜನತೆಗೆ ಉತ್ತರಿಸುವ ಕೆಲಸ ಮಾಡಲಿ ಎಂದರು.
ಗುಜರಾತ್ ಅಭಿವೃದ್ಧಿ ನಾಟಕ: ಮೋದಿ ಗುಜರಾತ್‌ನ ಅಭಿವೃದ್ಧಿ ಮಾಡಿದ್ದಾರೆಂಬುದು ನಾಟಕ ಎಂದು ಟೀಕಿಸಿದ ಪೂಜಾರಿ, ಮೋದಿ ಗುಜರಾತ್ ಅನ್ನು ಸ್ವರ್ಗ ಮಾಡಿಲ,್ಲ ಬದಲಿ ನರಕ ಮಾಡಿದ್ದಾರೆ. ಅಲ್ಲಿನ ಲಕ್ಷಾಂತರ ಎಕರೆ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಕೈಗಾರಿಕೆ ಮತ್ತು ಉದ್ಯಮಿಗಳಿಗೆ ನೀಡಲಾಗಿದೆ.
ಭೂ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ನೀಡದೆ ವಂಚಿಸಿದ್ದಾರೆ. ಸಂಕಷ್ಟಕ್ಕೊಳಗಾದ 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ಮತ್ತು ಬೆಂಬಲ ಬೆಲೆಯನ್ನು ಗುಜರಾತ್‌ನಲ್ಲಿ ನಿಲ್ಲಿಸಲಾಗಿದ್ದು, ರೈತರ ಬವಣೆ ಕೇಳುವವರಿಲ್ಲದಂತಾಗಿದೆ ಎಂದ ಪೂಜಾರಿ, ಗುಜರಾತ್ ಸಮಸ್ಯೆಯನ್ನು ಸರಿಯಾಗಿ ತಿಳಿಸಿಕೊಡುವಲ್ಲಿ ಅಲ್ಲಿನ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಿಫಲವಾಗಿರುವ ಕಾರಣ ಮೋದಿ 3 ಬಾರಿ ಮುಖ್ಯಮಂತ್ರಿಯಾಗುವಂತಾಯಿತು. ಇಂತಹ ವಿಚಾರದಲ್ಲಿ ಕಾಂಗ್ರೆಸ್‌ನವರಿಗಿಂತಲೂ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಧೈರ್ಯ ಮೆಚ್ಚುವಂಥದ್ದು. ಕೇಜ್ರಿವಾಲ್ ದೆಹಲಿ ಬದಲು ಗುಜರಾತ್‌ಗೆ ಹೋಗಿದ್ದರೆ ಅಲ್ಲಿ ಬಿಜೆಪಿ ಧೂಳಿಪಟವಾಗುತ್ತಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ವಿನಯ ಕುಮಾರ್ ಸೊರಕೆ, ಲ್ಯಾನ್ಸಿ ಮಸ್ಕರೇನಸ್, ಪಿ.ವಿ. ಮೋಹನ್ ಮತ್ತು ಮಹಮ್ಮದ್ ಬದ್ರುದ್ದೀನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

