ಅರ್ಜಿ ಆಹ್ವಾನ
ಕುಮಟಾ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ನವದೆಹಲಿ, ಪ್ರಾಯೋಜಿತ ಪಾಲಿಟೆಕ್ನಿಕ್ಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಅಡಿ 2014-15ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಮಟಾ, ಅಂಕೋಲಾ ಮತ್ತು ಹೊನ್ನಾವರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗಿಗಳಿಗೆ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಹಾಗೂ ಹೊಸದಾಗಿ ವಿಸ್ತರಣಾ ಕೇಂದ್ರ ತೆರೆಯಲು ಆಸಕ್ತರಿಗೆ ಮಾ. 28ರ ಒಳಗಾಗಿ ಪ್ರಾಂಶುಪಾಲರು ಮತ್ತು ಮುಖ್ಯ ಸಂಯೋಜನಾಧಿಕಾರಿಗಳು, ಪಾಲಿಟೆಕ್ನಿಕ್ಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ, ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್, ಕುಮಟಾ ಇಲ್ಲಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಇಚ್ಚಿಸುವವರು ತಾವು ನೀಡುವ ತರಬೇತಿಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು ಹಾಗೂ ಸದರಿ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಸೂಕ್ತ ತರಬೇತಿ ಪಡೆದ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಮತ್ತು ಮುಖ್ಯ ಸಂಯೋಜನಾಧಿಕಾರಿಗಳು ದೂ: 08386 223497 ಅಥವಾ ಜಿ.ಡಿ. ಭಟ್ ಆಂತರಿಕ ಸಂಯೋಜನಾಧಿಕಾರಿಗಳು ದೂ: 93427 82862 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಜ್ಯೇಷ್ಠತಾ ಪಟ್ಟಿ ಪ್ರಕಟ
ಕಾರವಾರ: ಪೊಲೀಸ್ ಇಲಾಖೆಯ ಶಾಖಾಧೀಕ್ಷಕ, ಅಧೀಕ್ಷಕ ಹುದ್ದೆಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ ಮಾ. 14ರಂದು ಪೊಲೀಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಉ.ಕ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಶಾಖಾಧೀಕ್ಷಕರ ಪುನರ್ವಿಲೋಕನದಲ್ಲಿ ತಾತ್ಕಾಲಿಕವಾಗಿ ನೀಡಿರುವ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದ ವಿವರ ವೆಬ್ಸೈಟ್ನಲ್ಲಿ ಪರಿಶೀಲಿಸಬೇಕು. ಆಕ್ಷೇಪಣೆಗಳೆನಾದರೂ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ನೌಕರರು ಪೊಲೀಸ್ ಕಚೇರಿಗೆ ಮಾ. 31ರ ಒಳಗೆ ವರದಿ ಸಲ್ಲಿಸಬೇಕು. ಪೊಲೀಸ್ ಹುದ್ದೆಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ ವೆಬ್ಸೈಟ್ ಢಿಢಿಢಿ.್ಞಡಠ.್ಜ್ಟಢ.್ಝಟಿ. ಪೊಲೀಸ್ ಅಧೀಕ್ಷಕರ ಕಚೇರಿ ಫಲಕದಲ್ಲಿ ಪರಿಶೀಲಿಸಬಹುದು.
ಪಾಶ್ಚಿಮಾತ್ಯ ಸಂಸ್ಕೃತಿ ಬೇಡ
ಶಿರಸಿ: ಹಿಂದೂ ಸಂಸ್ಕೃತಿ ಜಗತ್ತಿನಲ್ಲೇ ಆದರ್ಶವಾದುದು ಹಾಗೂ ಶ್ರೇಷ್ಠವಾದುದು. ಅದರ ವಾರಸುದಾರಿಕೆ ನಾವು ಉಳಿಸಿಕೊಳ್ಳಬೇಕಿದೆ. ಇಂದು ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ಲವರ್ಸ್ ಡೇ, ಸ್ನೇಹಿತರ ದಿನ, ಡಿ.31ರ ಆಚರಣೆಗಳು ಜೋರಾಗಿ ಯುವಕರು ಇಂತಹ ವಿಕೃತಿ ಸಂಸ್ಕೃತಿಯತ್ತ ವಾಲುತ್ತಿರುವುದು ಇದು ಸರಿಯಲ್ಲ ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಜಗದೀಶ ನಾಯ್ಕ ಹೇಳಿದರು. ಶನಿವಾರ ಸಂಜೆ ಅರವಿಂದ ಹಾಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಇದನ್ನು ಪರಿವರ್ತನೆ ಮಾಡಿ ಹಿಂದೂ ಸಂಸ್ಕೃತಿ ಉಳಿಸಲು ಶ್ರಮಿಸಬೇಕು. ಈ ಕಾರಣದಿಂದ ಸಾರ್ವಜನಿಕ ಯುಗಾದಿ ಉತ್ಸವ ಆಚರಣೆ ನಡೆಸಲಾಗುತ್ತಿದೆ ಎಂದರು. ಸಮಿತಿ ಅಧ್ಯಕ್ಷ ಜಗದೀಶ ನಾಯ್ಕ, ಸಂಚಾಲಕ ಕೃಷ್ಣ ಎಸಳೆ ನೇತೃತ್ವದಲ್ಲಿ ಶನಿವಾರ ಸಂಜೆ ಅರವಿಂದ ಹಾಲ್ನಲ್ಲಿ ನಡೆದ ಸಭೆಯಲ್ಲಿ ಉತ್ಸವದ ತಯಾರಿಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮಾ.31ರಂದು ಸಂಜೆ 5.30ಕ್ಕೆ ಜೂ ಸರ್ಕಲ್ನಿಂದ ಮೆರವಣಿಗೆಯು ಸಿ.ಪಿ. ಬಜಾರ್ ಮೂಲಕ ಹಳೆ ಬಸ್ ನಿಲ್ದಾಣ, ಶಿವಾಜಿ ಚೌಕದ ಮೂಲಕ ಮಾರಿಗುಡಿ ತಲುಪಲಿದೆ. ಆಕರ್ಷಕ ಶೋಭಾಯಾತ್ರೆಗೆ ವಿವಿಧ ಕಡೆಯಿಂದ ಪೌರಾಣಿಕ, ಧಾರ್ಮಿಕತೆಯ ರೂಪಕ, ಸ್ತಬ್ಧಚಿತ್ರ ತರಲು ಸೂಚಿಸಲಾಯಿತು. ನಗರದ ಮಹಿಳಾ ಮಂಡಳಿಗಳು ಪೂರ್ಣಕುಂಭ ಸಹಿತ ಶೋಭಾಯಾತ್ರೆಗೆ ಬರುವಂತೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂದೇಶ ನೀಡಲು ಪ್ರತಿ ವರ್ಷದಂತೆ ಸ್ವರ್ಣವಲ್ಲಿ ಶ್ರೀಗಳು, ಬಣ್ಣದಮಠದ ಶ್ರೀಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಶಿರಸಿಯ ಉತ್ಸವ ಕಂಡು ಜಿಲ್ಲೆಯ ಇತರ ತಾಲೂಕುಗಳಲ್ಲಿ ದಶಕದ ಈಚೆಗೆ ಸಾರ್ವಜನಿಕ ಯುಗಾದಿ ಉತ್ಸವ ನಡೆಯುತ್ತಿದೆ. ಶಿರಸಿ ಯುಗಾದಿ ಉತ್ಸವ ಆಚರಣೆ ರಾಜ್ಯಕ್ಕೆ ನಾಂದಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಇದರ ವೈಭವ ಕಡಿಮೆಯಾಗದೇ ಹೆಚ್ಚುವ ದೃಷ್ಟಿಯಿಂದ ಜನರು ಭಾಗವಹಿಸುವ ಮೂಲಕ ಸಹಕಾರ ನೀಡಬೇಕೆಂದು ಸಂಚಾಲಕ ಕೃಷ್ಣ ಎಸಳೆ ಹೇಳಿದರು. ಸಮಿತಿಯ ರಾಧಾ, ಸುವರ್ಣ ಸಜ್ಜನ, ಅಂಜನಾ ಭಟ್, ಸಂಧ್ಯಾ ಕುರ್ಡೆಕರ,ರಾಜೇಶ ಶೆಟ್ಟಿ, ರಿತೇಶ ರಾಮದಾಸ, ನಂದನ ಸಾಗರ, ನರಸಿಂಹ ನಾಯ್ಕ, ಚಂದ್ರು ಎಸಳೆ, ಮಹಾಂತೇಶ್ ಹಾದಿಮನಿ, ಮಹೇಶ, ವಿಘ್ನೇಶ್ವರ, ರವಿ ನಾಯ್ಕ, ರಾಜು ಭಂಡಾರಿ ಮತ್ತತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

