ಸ್ಟೆಪ್ಲರ್ ಪಿನ್ರೂಪದಲ್ಲಿ ಚಿನ್ನ ಕಳ್ಳಸಾಗಾಟ
ಮಂಗಳೂರು: ಸ್ಟೆಪ್ಲರ್ ಪಿನ್ಗಳು ರೂಪದಲ್ಲಿ ದುಬೈಯಿಂದ ಮಂಗಳೂರಿಗೆ ಚಿನ್ನ ಕಳ್ಳಸಾಗಾಟಕ್ಕೆ ಯತ್ನಿಸುತ್ತಿದ್ದ ಕಾಸರಗೋಡಿನ ವ್ಯಕ್ತಿಯನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. 577 ಗ್ರಾಂ. ಚಿನ್ನವನ್ನು ಡ್ರೈಫ್ರೂಟ್ಸ್ ಬಾಕ್ಸ್ ಒಳಗೆ ಇರಿಸಿದ್ದರು. ಚಿನ್ನದ ಪಿನ್ಗಳಿಗೆ ಬೆಳ್ಳಿ ಬಣ್ಣ ತುಂಬಿದ್ದು, ಮೇಲ್ನೋಟಕ್ಕೆ ತಿಳಿಯುತ್ತಿರಲಿಲ್ಲ. ಆದರೆ ಡ್ರೈಫ್ರೂಟ್ಸ್ ಬಾಕ್ಸ್ ಒಳಗೆ ಲೋಹ ನೋಡಿದ ಅಧಿಕಾರಿಗಳಿಗೆ ಸಂಶಯದಿಂದ ತಪಾಸಣೆ ನಡೆಸಿದಾಗ ಚಿನ್ನ ಕಳ್ಳ ಸಾಗಾಟ ಹೊರಬಿತ್ತು. ಚಿನ್ನದ ಒಟ್ಟು ಮೌಲ್ಯ ರು. 17,19,460 ಅಂದಾಜಿಸಲಾಗಿದೆ. ಕಾಸರಗೋಡು ಚೇಂಗಳ ನಿವಾಸಿ ನೆಸಿಫ್ ಕೋವಲ್ (28) ಭಾನುವಾರ ಬಳೆಗ್ಗೆ ಏರ್ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಬಜಪೆಗೆ ಆಗಮಿಸಿದ್ದ. ಆರೋಪಿಯನ್ನು ಪೊಲೀಸರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

